Mysore
17
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಮೈಸೂರು ಪಾಲಿಕೆಯಲ್ಲಿ ಹಣ ವಂಚನೆ ಆರೋಪ : ಮೂವರು ಅಧಿಕಾರಿಗಳ ಅಮಾನತ್ತು

ಮೈಸೂರು : ಕರ್ತವ್ಯಕ್ಕೆ ಗೈರಾದ ಪೌರಕಾರ್ಮಿಕರಿಗೆ ಸಂಬಳ ವಿತರಿಸಿ ಮಹಾನಗರ ಪಾಲಿಕೆ ಹಣವನ್ನು ವಂಚನೆ ಮಾಡಿದ ಆರೋಪದ ಮೇರೆಗೆ ಮೂವರು ಅಧಿಕಾರಿಗಳನ್ನು ನಗರಪಾಲಿಕೆ ಆಯುಕ್ತರು ಸೇವೆಯಿಂದ ಅಮಾನತ್ತು ಮಾಡಿದ್ದಾರೆ.

ಗೈರು ಹಾಜರಾಗಿರುವ ದಿನಗಳಿಗೆ ಪೌರಕಾರ್ಮಿಕರ ಹೆಚ್ಚುವರಿ ವೇತನ ಪಾವತಿಸಿ ಕರ್ತವ್ಯಲೋಪ ಎಸಗಿದ ನಗರಪಾಲಿಕೆಯ ಆರೋಗ್ಯಶಾಖೆ ಪ್ರಥಮ ದರ್ಜೆ ಸಹಾಯಕರಾದ ಕೆ.ಎಲ್.ಸಿ.ಪಾಪ, ಪುಷ್ಪಾವತಿ, ದ್ವಿತೀಯ ದರ್ಜೆ ಸಹಾಯಕರಾದ ಸಿ.ಎಚ್.ಅನಿತ ಅವರನ್ನು ಆಯುಕ್ತರು ಅಮಾನತ್ತು ಮಾಡಿದ್ದಾರೆ.

2025ರ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಸಂಬಂಧಿಸಿದಂತೆ ಆರೋಗ್ಯ ನಿರೀಕ್ಷಕರು ನೀಡಿರುವ ಹಾಜರಾತಿ ಪಟ್ಟಿಯೊಂದಿಗೆ ಪರಿಶೀಲಿಸಿ ಎಂ.ಪುಷ್ಪಾವತಿ ಅವರು ಒಟ್ಟು 1,17,081ರೂ., ಸಿ.ಎಚ್.ಅನಿತಾ ಇವರು ಒಟ್ಟು 1,54,705 ರೂ.ಗಳು, ಕೆ.ಎಲ್.ಸಿ.ಪಾಪ ಅವರು 13,58,525 ರೂ.ಗಳನ್ನು ಗೈರು ಹಾಜರಿ ದಿನಗಳಿಗೂ ವೇತನ ಪಾವತಿಸಿರುವುದು ಕಂಡುಬಂದಿರುತ್ತದೆ. ಇದು ಕರ್ತವ್ಯಲೋಪ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಆಯುಕ್ತರು ಇಲಾಖೆ ವಿಚಾರಣೆ ಕಾಯ್ದಿರಿಸಿ ಜ.21ರಂದು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ಇಲಾಖೆಯಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು, ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ಕಾಯಂ ಪೌರಕಾರ್ಮಿಕರು ನಿಧನರಾದರೆ ಅನುಕಂಪದ ಆಧಾರದ ಕೆಲಸ ನೀಡಲು ಲಕ್ಷಾಂತರ ರೂ. ಲಂಚ ಕೇಳುತ್ತಿದ್ದರು. ಎಲ್‌ಐಸಿ ಪಾಲಿಸಿಗಳನ್ನು ಇವರೇ ಮಾಡುತ್ತಿದ್ದರು. ಈ ಬಗ್ಗೆ ಆರೋಗ್ಯ ಶಾಖೆಯ ಅಕ್ರಮಗಳ ಬಗ್ಗೆ ನಗರಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿತ್ತು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ಆರ್ಟಿಸ್ಟ್ ಎಸ್.ನಾಗರಾಜ್ ತಿಳಿಸಿದ್ದಾರೆ.

 

 

 

 

Tags:
error: Content is protected !!