Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರನ್ನು ಹಸಿರಾಗಿಸಲು ಮಹಾನಗರ ಪಾಲಿಕೆ ಸಜ್ಜು

ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು

ಮೈಸೂರು: ಪ್ರವಾಸಿಗರ ಸ್ವರ್ಗವಾಗಿರುವ ಪಾರಂಪರಿಕ ನಗರಿ ಮೈಸೂರಿನ ಸೊಬಗಿಗೆ ಮತ್ತಷ್ಟು ಮೆರಗು ನೀಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಇನ್ನು ಮುಂದೆ ಮೈಸೂರು ಹಸಿರು ಮೈಸೂರಾಗಿ ಕಂಗೊಳಿಸಲಿದೆ

ಹೌದು ಮೈಸೂರು ನಗರದ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಹಾಗೂ ಮೈಸೂರನ್ನು ಹಸಿರು ನಗರವಾಗಿ ಮಾಡುವುದಕ್ಕೆ ಮೈಸೂರು ನಗರ ಹೊಸ ಯೋಜನೆ ಒಂದನ್ನು ಶುರು ಮಾಡಿದ್ದು, ಎರಡು ರಸ್ತೆಯ ಮಧ್ಯ ಭಾಗದಲ್ಲಿ ಅಲಂಕಾರಿಕ‌ ಹಾಗೂ ಹೂವಿನ ಗಿಡಗಳನ್ನು ನೆಡುವುದಕ್ಕೆ ಮುಂದಾಗಿದೆ.

15 ನೇ ಹಣಕಾಸು ಅಯೋಗದಲ್ಲಿ ಸುಮಾರು 4 ಕೋಟಿ ರೂ ವೆಚ್ಚದಲ್ಲಿ ನಗರದ ಎರಡು ರಸ್ತೆಯ ಮಧ್ಯೆ ಸುಮಾರು 47 ಕಿ.ಮೀ ವರೆಗೆ ಸಸಿಗಳನ್ನು ನೆಡುವುದಕ್ಕೆ ಪ್ರತ್ಯೇಕ ಗುತ್ತಿಗೆಯನ್ನು ನೀಡಲಾಗಿದೆ. ಗಿಡ ನೆಡುವುದಕ್ಕೆ ಗುತ್ತಿಗೆ ತೆಗೆದುಕೊಂಡವರೇ 2 ವರ್ಷಗಳ ಕಾಲ ಗಿಡಗಳನ್ನು ಪೋಷಣೆ ಮಾಡುವ ಹೊಣೆಯನ್ನು ಹೊತ್ತಿರುವುದು ವಿಶೇಷವೆನಿಸಿದೆ.

ಮೈಸೂರಿಗೆ ಪ್ರತಿ ದಿನವು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸುತ್ತಾರೆ. ಈ ಕಾರಣದಿಂದ ಅಲಂಕಾರಿಕ ಸಸಿಗಳನ್ನು ನೆಟ್ಟರೆ ನಗರ ಸುಂದರವಾಗಿ ಕಾಣುತ್ತದೆ. ಜೊತೆಗೆ ಸುತ್ತಮುತ್ತ ಆಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವ ಯೋಜನೆಯಿಂದ ಮಹಾನಗರ ಪಾಲಿಕೆ ವತಿಯಿಂದ ಎಮಿಲಿಯಾ, ಬೋಗನ್‌ ವಿಲ್ಲಾ, ಪ್ಲೊಮೇರಿಯಾ ಪುಡಿಕ್‌, ರಾಯಲ್‌ ಪಾಮ್‌ ನಂದಿ ಬಟ್ಟಲು, ಕಣಗಲೆ, ಬಿಳಿ ಹಾಗೂ ಹಳದಿ ಹೂವುಗಳ ಗಿಡಗಳನ್ನು ನೆಡಲಾಗುತ್ತಿದೆ.

ನಗರದ ಯಾವ ಯಾವ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ:
ಮೈಸೂರು ನಗರದಲ್ಲಿ 47 ಕಿ.ಮೀವರೆಗೆ ಸಸಿಗಳನ್ನು ನೆಡುವ ಕಾರ್ಯ ಮಾಡಿರುವ ಮಹಾನಗರ ಪಾಲಿಕೆ, ಮೈಸೂರಿನ ಯರಗನಹಳ್ಳಿ ವೃತ್ತದಿಂದ ಮಹದೇವಪುರ ವೃತ್ತದವರೆಗೆ (3 ಕಿ.ಮೀ.), ಕುರುಬಾರಹಳ್ಳಿಯಿಂದ ಹಾಲಿನ ಡೇರಿವರೆಗೆ (0.75 ಕಿ.ಮೀ.), ಹಾಲಿನ ಡೇರಿ ವೃತ್ತದಿಂದ ದೇವೇಗೌಡ ವೃತ್ತದವರೆಗೆ (3.50 ಕಿ.ಮೀ.), ಎಸ್‌ಪಿ ಆಫೀಸ್‌ ವೃತ್ತದಿಂದ ಗಾಯತ್ರಿಪುರಂ ಮುಖ್ಯರಸ್ತೆವರೆಗೆ 0.40 ಕಿ.ಮೀ, ಫೋರಂ ಮಾಲ್‌ನಿಂದ ರಾಜೀವ್‌ ನಗರ (3 ಕಿ.ಮೀ.), ಫೌಂಟನ್‌ ವೃತ್ತದಿಂದ ಶಿವಾಜಿ ಮುಖ್ಯರಸ್ತೆವರೆಗೆ (0.85), ಮೆಟ್ರೋಪೋಲ್‌ ವೃತ್ತದಿಂದ ಹಿನಕಲ್‌ವರೆಗೆ (6 ಕಿ.ಮೀ.), ದಾಸಪ್ಪ ವೃತ್ತದಿಂದ ರಿಂಗ್‌ ರಸ್ತೆವರೆಗೆ (5 ಕಿ.ಮೀ.), ಕೋರ್ಟ್‌ ಮುಂಭಾಗದಿಂದ ಅಗ್ರಹಾರ ವೃತ್ತದವರೆಗೆ (5 ಕಿ.ಮೀ.), ಏಕಲವ್ಯ ವೃತ್ತದಿಂದ ಹಾರ್ಡಿಂಜ್‌ ವೃತ್ತದವರೆಗೆ (4 ಕಿ.ಮೀ.), ಸಿಲ್ಕ್ ಫ್ಯಾಕ್ಟರಿ ವೃತ್ತದಿಂದ ರಿಂಗ್‌‌ ರಸ್ತೆವರೆಗೆ (4 ಕಿ.ಮೀ.), ಕುಕ್ಕರಹಳ್ಳಿ ಸಿಗ್ನಲ್‌ನಿಂದ ದಟ್ಟಗಳ್ಳಿವರೆಗೆ (5 ಕಿ.ಮೀ.), ರೈಲ್ವೆ ಸ್ಟೇಷನ್‌ನಿಂದ ರಾಮಸ್ವಾಮಿ ವೃತ್ತದವರೆಗೆ (1.5 ಕಿ.ಮೀ.), ಪೆವಿಲಿಯನ್‌ ಆಟದ ಮೈದಾನದಿಂದ ನ್ಯಾಯಾಲಯದವರೆಗೆ (1 ಕಿ.ಮೀ.), ಸೌಗಂಕಾ ಉದ್ಯಾನದ ಮುಂಭಾಗದಿಂದ ಶಾಂತಿಸಾಗರ್‌ ಕಾಂಪ್ಲೆಕ್ಸ್‌ವರೆಗೆ (0.50 ಕಿ.ಮೀ.), ಫೌಂಟೇನ್‌ ವೃತ್ತದಿಂದ ಟಿಪ್ಪು ವೃತ್ತದವರೆಗೆ (0.50 ಕಿ.ಮೀ.), ಕೃಷ್ಣದೇವರಾಯ ವೃತ್ತದಿಂದ ರಿಂಗ್‌ ರಸ್ತೆವರೆಗೆ (1.50 ಕಿ.ಮೀ.), ಒಂಟಿಕೊಪ್ಪಲು ವೃತ್ತದಿಂದ ಸೆಂಟ್‌ ಜೋಸೆಫ್‌ ಶಾಲೆ ವೃತ್ತದವರೆಗೆ (2 ಕಿ.ಮೀ.), ನಂಜರಾಜ ಬಹದ್ದೂರ್‌ ಛತ್ರದ ಮುಂಭಾಗದ ರಸ್ತೆ ವಿಭಜಕ (0.50 ಕಿ.ಮೀ.), ಬೆಂಗಳೂರು ನೀಲಗಿರಿ ರಸ್ತೆ ವಿಭಜಕ (1 ಕಿ.ಮೀ.), ಸುಭಾಷ್‌ ನಗರ ದಂಡಿ ಮಾರಮ್ಮನ ರಸ್ತೆ ವಿಭಜಕ ಹಾಗೂ ಬೆಂಗಳೂರು – ಮೈಸೂರು ರಸ್ತೆ (2 ಕಿ.ಮೀ) ಮತ್ತು ನಾತ್‌ರ್‍ ಈಸ್ಟ್‌ ಆಫ್‌ ಎನ್‌.ಆರ್‌.ಮೊಹಲ್ಲಾ ದ್ರಾವಿಡ ಪಾರ್ಕ್ ನಿಂದ ರಾಜೀವ್‌ ನಗರ ಸೂರ್ಯನಾರಾಯಣ ದೇವಸ್ಥಾನದವರೆಗೆ (0.60 ಕಿ.ಮೀ) ಆಲಂಕಾರಿಕ ಸಸಿಗಳನ್ನು ನೆಡಲಾಗುತ್ತಿದೆ.

 

Tags:
error: Content is protected !!