Mysore
22
broken clouds
Light
Dark

ಮೈಸೂರು ಬ್ರಾಂಡ್‌ ಜನಪ್ರಿಯತೆಗೆ ಸರ್.ಎಂ.ವಿ ಅವರ ಶಾಶ್ವತ ಯೋಜನೆ ಕಾರಣ: ಟಿ ಎಸ್. ಶ್ರೀವತ್ಸ

ಮೈಸೂರು: ಮೈಸೂರು ಸಂಸ್ಥಾನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಅಭಿವೃದ್ಧಿಗೆ ದಿವಾನ್ ಸರ್.ಎಂ ವಿಶ್ವೇಶ್ವರಯ್ಯ ಅವರು ಶತಮಾನದ ಹಿಂದೆಯೇ ಶಾಶ್ವತ ಯೋಜನೆ ರೂಪಿಸಿದ್ದರು ಎಂದು ಶಾಸಕ  ಟಿ ಎಸ್. ಶ್ರೀವತ್ಸ ಹೇಳಿದರು.

ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿ ಬಳಗದ ವತಿಯಿಂದ ಭಾರತ ರತ್ನ ದಿವಾನ್ ಸರ್ ಎಂ ವಿಶ್ವೇಶ್ವರಯ್ಯ ರವರ 163ನೇ ಜಯಂತಿಯ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕರಿಗೆ ಮೈಸೂರು ಪಾಕ್ ವಿಚರಿಸಿ ಮಾತನಾಡಿದರು.

ಮೈಸೂರು ಬ್ರಾಂಡ್ ಇವತ್ತು ದೇಶದಲ್ಲಿ ಜನಪ್ರಿಯವಾಗಲು ಸ್ಥಳೀಯ ಮಾರುಕಟ್ಟೆಯ ಮೂಲಕ ಗ್ರಾಮೀಣ ರೈತರನ್ನ, ವ್ಯಾಪಾರಸ್ಥರು ಉದ್ಯಮಿಗಳನ್ನ ಒಗ್ಗೂಡಿಸಿ ಮೈಸೂರಿನ ವಿಶೇಷತೆಯನ್ನ ಪ್ರೋತ್ಸಾಹಿಸಿದವರು ಸರ್. ಎಂ ವಿಶ್ವೇಶ್ವರಯ್ಯ ಅವರು, ಇಂದಿನ ಯುವ ಪೀಳಿಗೆ  ಅವರ ಜೀವನಚರಿತ್ರೆ  ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಸರ್.‌ ಎಂ.ವಿಶ್ವೇಶ್ವರಯ್ಯ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪಿಸಿ: ಶ್ರೀಕಂಠಕುಮಾರ್

ಅಂಣಕಾರರಾದ ನಂ.ಶ್ರೀಕಂಠಕುಮಾರ್ ಮಾತನಾಡಿ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯ, ಕೆಆರ್ ಎಸ್, ಮೈಸೂರು ಸ್ಯಾಂಡಲ್, ಕನ್ನಡ ಸಾಹಿತ್ಯ ಪರಿಷತ್, ಭದ್ರಾವತಿ ಉಕ್ಕಿನ ಕಾರ್ಖಾನೆ ಸೇರಿದಂತೆ ಹಲವಾರು ಯೋಜನೆಗಳನ್ನ ಕಾರ್ಯರೂಪಕ್ಕೆ ಬರಲು ಕಾರಣರಾದರು. ಹೀಗಾಗಿ ಅಂತಹ ಮಹಾನ್‌ ವ್ಯಕ್ತಿಯ ಹೆಸರಲ್ಲಿ  ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದರು.

 

ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ,ನಿರೂಪಕ ಅಜಯ್ ಶಾಸ್ತ್ರಿ, ವಿಜಯ್ ಕುಮಾರ್, ಕೇಬಲ್ ವಿಜಿ, ಪ್ರದೀಪ್ ಕುಮಾರ್,ಸೂರಜ್, ಸದಾಶಿವ್, ಗಣೇಶ್, ವಿಘ್ನೇಶ್ವರ ಭಟ್, ಬ್ರಹ್ಮಚಾರ್, ಶ್ರೀನಿವಾಸ್, ಮಿರ್ಲೆ ಪನೀಶ್, ರಾಘವೇಂದ್ರ, ಹಾಗೂ ಇನ್ನಿತರರು ಹಾಜರಿದ್ದರು