Mysore
17
clear sky

Social Media

ಗುರುವಾರ, 11 ಡಿಸೆಂಬರ್ 2025
Light
Dark

ವಕ್ಫ್‌ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ: ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ

ಮೈಸೂರು: ನನಗೆ ಅಧಿಕಾರ ಇರಲಿ ಬಿಡಲಿ ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಈ ಕುರಿತು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ್ ವಿವಾದದ ವಿರುದ್ಧದ ಹೋರಾಟದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರು ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ನನಗೆ ಯಾವುದೇ ಬಣ ಇಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ. ನನಗೆ ಅಧಿಕಾರ ಇರಲಿ ಬಿಡಲಿ ಜನರ ಪರವಾಗಿ ಹೋರಾಟ ಮಾಡುತ್ತೇನೆ. ಅಧಿಕಾರದಲ್ಲಿ ಇದ್ದಾಗಲೂ ಅನೇಕ ಹೋರಾಟ ಮಾಡಿದ್ದೇನೆ. ಈಗಲೂ ನನ್ನ ಹೋರಾಟ ಮುಂದುವರೆಸುತ್ತೇನೆ. ವಕ್ಫ್ ವಿರುದ್ಧವಷ್ಟೇ ನನ್ನ ಹೋರಾಟ. ಮೋದಿಯೂ ಬಿಜೆಪಿ ಕಾರ್ಯಕರ್ತ, ನಾನು ಕೂಡ ಬಿಜೆಪಿ ಕಾರ್ಯಕರ್ತ. ನಾನು ಜನರ ಕೆಲಸ ಮಾಡಲಿಕ್ಕೆ ಬಂದಿರುವವನು. ಜನರು ತಮ್ಮ ಮನಸ್ಸಿನಲ್ಲಿ ನನಗೆ ಸ್ಥಾನ ಕೊಟ್ಟಿದ್ದಾರೆ, ನನಗೆ ಇಷ್ಟು ಸಾಕು ಎಂದರು.

ಇನ್ನು ವಕ್ಫ್ ಭೂ ಕಬಳಿಕೆ ವಿಚಾರಕ್ಕೆ ರಾಜ್ಯದಲ್ಲಿ ಹೋರಾಟ ಶುರುವಾಗಿದೆ. ರೈತರು ತೀವ್ರ ಕಂಗಾಲಾಗಿದ್ದಾರೆ. ಯಾವಾಗ ಭೂ ಕಬಳಿಕೆ ಆಗಿದೆ ಅನ್ನೋದು ಗೊತ್ತಾಗದಾಗಿದೆ. ರೈತರು, ಮಠಗಳು ಹಲವರ ಆಸ್ತಿಗಳು ವಕ್ಫ್ ಆಸ್ತಿಗಳಾಗಿ ಬದಲಾಗುತ್ತಿವೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಆತಂಕ ಎದುರಾಗಿದೆ. ಹಿಂದುಗಳು, ರೈತರ ಭೂಮಿಗೆ ಕಂಟಕವಾಗಿದೆ ಎಂದು ಸಿಎಂ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಮಂತ್ರಾಲಯಕ್ಕೂ ನಾವೇ ಭೂಮಿ ದಾನ ಕೊಟ್ಟಿದ್ದು ಎಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮಗೆ ಭೂಮಿ ದಾನ ಮಾಡಲಿಕ್ಕೆ ನಿಮಗೆಲ್ಲಿಂದ ಭೂಮಿ ಬಂತು. ಇಸ್ಲಾಂ ಧರ್ಮ ಹುಟ್ಟಿದ್ದು ಮರುಭೂಮಿಯಲ್ಲಿ. ನಾವು ಮುಸ್ಲಿಮರಿಗೆ ಆಶ್ರಯ ಕೊಟ್ಟಿರುವುದು. ಮಹಮ್ಮದ್ ಘಜಿನಿ, ಬಾಬರ್ ಎಲ್ಲರೂ ಭಾರತಕ್ಕೆ ಬಂದು ಭೂಮಿ ವಶಪಡಿಸಿಕೊಂಡರು. ಅದಾದ ನಂತರ ನಾವು ಕೂಡ ನಮ್ಮ ಭೂಮಿಯನ್ನು ಹೋರಾಟ ಮಾಡಿ ಉಳಿಸಿಕೊಂಡಿದ್ದೇವೆ ಎಂದು ಕಿಡಿಕಾರಿದರು.

 

Tags:
error: Content is protected !!