Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮುಡಾ ಹಗರಣ: ಸಿಎಂ ಪತ್ನಿ ಈಗ ನಿವೇಶನ ವಾಪಸ್‌ ಕೊಟ್ಟರೆ ಪ್ರಯೋಜನವಿಲ್ಲ: ಪ್ರತಾಪ್‌ ಸಿಂಹ

ಮೈಸೂರು: ಮುಡಾ ಹಗರಣದಲ್ಲಿ ತನಿಖೆ ಹಂತಕ್ಕೆ ಹೋದಮೇಲೆ ಸಿಎಂ ಪತ್ನಿ ಈಗ ನಿವೇಶನಗಳನ್ನು ವಾಪಸ್‌ ಕೊಟ್ಟರೆ ಏನು ಪ್ರಯೋಜನವಿಲ್ಲ, ಇದೀಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಅಷ್ಟೇ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಒತ್ತಾಯಿಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಬೆಳಕಿಗೆ ಬಂದ ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ನಿವೇಶನವನ್ನು ವಾಪಾಸ್‌ ನೀಡಿ, ಮುಕ್ತ ತನಿಖೆ ಎದುರಿಸುವಂತೆ ಸಲಹೆ ನೀಡಿದ್ದೆ. ಆದರೆ ಸಿದ್ದರಾಮಯ್ಯ ಅವರು ಕೇಳಲಿಲ್ಲ. ಇ.ಡಿ.ಯಲ್ಲಿ ಹಗರಣದ ಬಗ್ಗೆ ಪ್ರಕರಣ ದಾಖಲಾದ ನಂತರ ನಿವೇಶನಗಳನ್ನು ವಾಪಾಸ್‌ ಕೊಟ್ಟಿದ್ದಾರೆ. ಈ ಹಿಂದೆಯೇ ನಿವೇಶನಗಳನ್ನು ವಾಪಾಸ್‌ ನೀಡಿದ್ದರೆ ಸಿಎಂ ಕುರ್ಚಿ ಕಳೆದುಕೊಳ್ಳುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ನಿವೇಶನಗಳನ್ನು ಈಗ ಕೊಟ್ಟರೆ ಏನು ಪ್ರಯೋಜನ ಇಲ್ಲ. ಈಗ ಸಿದ್ದರಾಮಯ್ಯ ಅವರ ಮುಂದೆ ಇರುವುದು ಒಂದೇ ದಾರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸುವುದು ಅಷ್ಟೇ ಎಂದು ಹೇಳಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 2023ರ ವಿಧಾನಸಭಾ ಚುನಾವಣೆಯಲ್ಲಿಯೇ ಮುಡಾದ 50:50 ಅನುಪಾತದ ಬದಲಿ ನಿವೇಶನಗಳ ಬಗ್ಗೆ ಅಕ್ರಮದ ದಾಖಲೆ ಬಂದಿತ್ತು. ಆದರೆ ಅವರು ಸಿದ್ದರಾಮಯ್ಯ ಅವರ ಪತ್ನಿ ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಲಿಲ್ಲ ಎಂದು ತಿಳಿಸಿದರು.

ಈ ಹಗರಣ ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೆ ಒಂದು ಪಾಠ

ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕೀಯ ಮಾಡುವ ಎಲ್ಲ ರಾಜಕಾರಣಿಗಳಿಗೂ ಈ ಹಗರಣ ಒಂದು ಮಾದರಿಯ ಪಾಠವಾಗಿರಲಿದೆ. ಕುಟುಂಬ ರಾಜಕಾರಣ ಮಾಡುವ ವ್ಯಕ್ತಿಗಳು ಮುಂದೆ ಆದರೂ ಎಚ್ಚರಿಕೆಯಿಂದ ಹೆಜ್ಜೆ ಇಡುವಮತಾಗಬೇಕು. ಇಲ್ಲವಾದರೆ ನಿಮ್ಮ ಸ್ಥಾನದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಮಾಡಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇತಂಹ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡ ನಂತರ ಕಣ್ಣೀರು ಹಾಕಿದರೆ ಏನು ಪ್ರಯೋಜನವಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಎಂದಿಗೂ ಬಹಿರಂಗವಾಗಿ ಕಾಣಿಸಿಕೊಂಡವರಲ್ಲ. ಇಂದು ಅವರು ಈ ಹಗರಣದಿಂದ ಕಟಕಟೆಗೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅವರ ಬಗ್ಗೆ ನನಗೆ ವೈಯಕ್ತಿಕ ಮರುಕ ಇದೆ. ಆದರೆ ಮುಡಾ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆಗೆ ಅನುಮತಿ ನೀಡಿದ ನಂತರ ನಿವೇಶನವನ್ನು ವಾಪಾಸ್‌ ನೀಡಿದರೆ ಯಾರೂ ಒಪ್ಪುವುದಿಲ್ಲ. ಕದ್ದ ಮಾಲು ವಾಪಾಸ್‌ ಕೊಟ್ಟ ಮಾತ್ರಕ್ಕೆ ಕಳ್ಳತನವನ್ನು ಬಿಡಲು ಆಗದು. ಸಿದ್ದರಾಮಯ್ಯ ಅವರು ಮುಡಾದಿಂದ ಅಕ್ರಮವಾಗಿ ಪಡೆದ ನಿವೇಶಗಳಿಗೆ 62 ಕೋಟಿ ರೂ.ಗಳನ್ನು ಕೇಳಿದಾಗಲೇ ಅವರ ಮೇಲೆ ಇದ್ದ ಗೌರವ ನೆಲ ಕಚ್ಚಿದೆ. ಅವರಿಂದ ಈ ಮಾತನ್ನು ನೀರಿಕ್ಷಿಸರಿರಲಿಲ್ಲ ಎಂದು ಹೇಳಿದರು.

Tags: