Mysore
23
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮುಡಾ ಕೇಸ್: ಸಿದ್ದರಾಮಯ್ಯ ವಿರುದ್ಧ ದೂರು ನೀಡಲು SPಕಚೇರಿಯಲ್ಲಿ ಕಾದ ದೂರುದಾರ ಸ್ಹೇಹಮಹಿ ಕೃಷ್ಣ

ಮೈಸೂರು: ಸ್ನೇಹಮಯಿ ಕೃಷ್ಣ ಸಿಎಂ ಸಿದ್ದರಾಮಯ್ಯ ವಿರುದ್ದ ದೂರು ದಾಖಲಿಸಲು ಲೋಕಾಯುಕ್ತ ಎಸ್‌.ಪಿ ಕಚೇರಿಯಲ್ಲಿ ಕಾದು ಕುಳಿತ್ತಿದ್ದರು. ಎರಡು ಗಂಟೆ ಕಾಲ ಕಾದರೂ ಕಚೇರಿಗೆ ಎಸ್‌.ಪಿ ಆಗಮಿಸಿದ ಹಿನ್ನಲೆ ಸಿದ್ದರಾಮಯ್ಯ ಕಡೆಯವರು ಎಸ್‌.ಪಿಯನ್ನು ಅಪಹರಣ ಮಾಡಿರಬಹುದು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಪ್ರಕರಣದಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿರುವ ಆದೇಶದ ಆನ್‌ಲೈನ್‌ ಪ್ರತಿಯೊಂದಿಗೆ ಮಧ್ಯಾಹ್ನ 12;30ರ ಸುಮಾರಿಗೆ ಅವರು ಲೋಕಾಯುಕ್ತ ಕಚೇರಿಗೆ ಬಂದಿದ್ದರು. ಆದರೆ, ಈ ಸಂದರ್ಭ ಎಸ್‌.ಪಿ ಉದೇಶ್‌ ಕಚೇರಿಯಲ್ಲಿ ಇರಲಿಲ್ಲ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರ ಸ್ಹೇಹಮಹಿ ಕೃಷ್ಣ, ನಿನ್ನೆಯೇ ನಾನು ಬರುವ ಬಗ್ಗೆಮಾಹಿತಿ ನೀಡಿದ್ದೆ. ಆದರೂ ಲೋಕಯುಕ್ತ ಕಚೇರಿಯಲ್ಲಿ ಎಸ್‌ಪಿ ಇರಲಿಲ್ಲ. ಇದನ್ನ ನೋಡಿದರೆ ನನಗೆ ಅವರನ್ನು ಅಪಹರಣ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂಬ ಗಂಭೀರ ಆರೋಪ ಮಾಡಿದರು.

ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ.ಹೀಗಾಗಿ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿ ಎಂದು ನಾಳೆ ಹೈಕೋರ್ಟ್‌ಗೆ ಅರ್ಜಿ ಹಾಕ್ತವೇ ಎಂದು ತಿಳಿಸಿದರು.

Tags:
error: Content is protected !!