ಮೈಸೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ.50:50 ಅನುಪಾತದ ಬದಲಿ ನಿವೇಶನ ಹಂಚಿಕೆ ಹಗರಣ ಬಯಲಾದ ಬಳಿಕ ಮತ್ತೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಮುಡಾ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ಆರ್.ಮಂಜುನಾಥ ಅವರನ್ನು ಕಬಿನಿ ಜಲಾಶಯ ಯೋಜನೆ-೨ರ ವಿಶೇಷ ಭೂಸ್ವಾಧೀನಾಧಿಕಾರಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಹಗರಣ ಹಿನ್ನೆಲೆ ವರ್ಗಾವಣೆಯಾದ ನಾಲ್ಕನೇ ಅಧಿಕಾರಿ ಇವರು. ಇದಕ್ಕೂ ಮುನ್ನ, ಆಯುಕ್ತ, ಕಾರ್ಯದರ್ಶಿ ಹಾಗೂ ಒಬ್ಬ ಇಂಜಿನಿಯರ್ ವರ್ಗಾವಣೆಯಾಗಿದ್ದರು.