ಮೈಸೂರು: ಶೀಘ್ರದಲ್ಲೇ ನಗರದ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ಎಂಟು ರೈಲುಗಳ ಸೇವೆ ವಿಸ್ತಾರಗೊಳ್ಳಲಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶೀಘ್ರದಲ್ಲಿ ಇಲ್ಲಿನ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ ಎಂಟು ರೈಲುಗಳ ಸೇವೆ ವಿಸ್ತಾರಗೊಳ್ಳಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದಿದ್ದಾರೆ.
ಟ್ರ್ಯಾಕ್ 1 ರಿಂದ 5ರವರೆಗೆ ಸಂಪೂರ್ಣ ವಿದ್ಯುದಿಕರಣಗೊಳಿಸಿˌ ಅಶೋಕಪುರಂ ಯಾರ್ಡ್’ನ ಮೂಲಕ ರೈಲು ಸೇವೆ ಕಾರ್ಯಾರಂಭಗೊಂಡು ಜನತೆಗೆ ಅನುಕೂಲವಾಗುವಂತೆ ಮಾಡಿದ ನೈಋತ್ಯ ರೈಲ್ವೆ ಇಲಾಖೆಯ ಪರಿಶ್ರಮ ಹಾಗೂ ಅವರ ಕಾರ್ಯಕ್ಷಮತೆ ಪ್ರಶಂಸನೀಯವಾಗಿದೆ ಇದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಸರ್ಕಾರದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ಭಾರತೀಯ ರೈಲು ಸೇವೆ ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ. ಅಶೋಕಪುರಂವರೆಗಿನ ರೈಲು ಸೇವೆಗಳ ವಿಸ್ತರಣೆಯು ಮೈಸೂರು ಮತ್ತು ಹತ್ತಿರದ ಪ್ರದೇಶದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ನೈಋತ್ಯ ರೈಲ್ವೆಯು ಸಂಪರ್ಕ ಮತ್ತು ಮೂಲ ಸೌಕರ್ಯವನ್ನು ಸುಧಾರಿಸುವಲ್ಲಿ ದಾಪುಗಾಲು ಹಾಕುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಶೋಕಪುರಂ ರೈಲು ನಿಲ್ದಾಣದವರೆಗೆ ವಿಸ್ತಾರವಾಗಿರುವ ರೈಲು ಸೇವೆಗಳು ಹಾಗೂ ಅಶೋಕಪುರಂನಿಂದ ಪ್ರಾರಂಭವಾಗುವ ರೈಲು ಸೇವೆಗಳ ಪಟ್ಟಿ ಇಂತಿವೆ.
1.MAS-MYS-MAS ಕಾವೇರಿ ಎಕ್ಸ್‌ಪ್ರೆಸ್(16021/22)
2. MAS-MYS-MAS ಎಕ್ಸ್‌ಪ್ರೆಸ್(12609/10)
3. SBC-MYS-SBC ಮಾಲ್ಗುಡಿ ಎಕ್ಸ್‌ಪ್ರೆಸ್(20624/23)
4. KCG-MYS-KCG ಎಕ್ಸ್‌ಪ್ರೆಸ್(12785/86)
5. SBC-MYS-SBC ಮೆಮು(06525/26)
6. SBC-MYS-SBC ಮೆಮು(06559/60)
7. SBC-MYS-SBC ಮೆಮು(06255/56)
8. SBC-MYS ಮೆಮು(06257/58)





