Mysore
19
scattered clouds
Light
Dark

ಮುಡಾ ಹಗರಣದ ತನಿಖೆ ಸಿಬಿಐಗೆ ವಹಿಸಲು ಎಂಎಲ್ಸಿ ಎಚ್.ವಿಶ್ವನಾಥ್ ಆಗ್ರಹ

ಮೈಸೂರು : ಮುಡಾದಲ್ಲಿ ೧೦ ಸಾವಿರ ಕೋಟಿ ಅಕ್ರಮ ನಡೆದಿದೆ. ಪೊಲೀಸರು ಇದನ್ನ ತನಿಖೆ ಮಾಡಲು ಸಾಧ್ಯವಿಲ್ಲ. ಈಗಾಗಿ ಈ ತನಿಖೆಯನ್ನ ಸಿಬಿಐಗೆ ವಹಿಸಬೇಕು, ಇಲ್ಲದಿದ್ದರೆ ಹಳ್ಳ ಹಿಡಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಳ್ಳಿಹಕ್ಕಿ,  ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬರುವುದಕ್ಕೂ ಮೊದಲೇ ಮುಡಾ ಅಧ್ಯಕ್ಷ ಮರಿಗೌಡ , ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಸಮರ್ಥಿಸಿಕೊಳ್ಳುತ್ತಿದ್ದಾರೆ.  ತನಿಖೆ ಸಂಸ್ಥೆ ಮೇಲೆ ಗೌರವ ಇಲ್ವಾ..? ಮಹದೇಪ್ಪ ಒಬ್ಬ ಕ್ಯಾಬಿನೆಟ್‌ ಮಿನಿಸ್ಟರ್‌ ಆಗಿ ಈ ರೀತಿ ಹೇಳಿದ್ರೆ ತನಿಖೆ ಯಾವ ರೀತಿ ಮಾಡಬೇಕು. ನೀವು ಮತ್ತು ನಿಮ್ಮ ಕಾಂಗ್ರೆಸ್‌ ಶಾಸಕರು ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನಾವಶ್ಯಕವಾಗಿ ಮಾತಾಡೋದನ್ನ ಮೊದಲು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ಅಲ್ಲದೆ ಮುಡಾ ಅಧ್ಯಕ್ಷ ಮರಿಗೌಡ ಅವನೊಬ್ಬ ದೊಡ್ಡ ಮೂಡ. ಅವನು ನನ್ನ ನೈತಿಕತೆ ಬಗ್ಗೆ ಏನು ಮಾತನಾಡೋದು. ಅದಕ್ಕೆ ಈ ಪ್ರಕರಣ ಸಿಬಿಐಗೆ ವಹಿಸಬೇಕು. ಇಲ್ಲ ಅಂದರೆ ಹಳ್ಳ ಹಿಡಿಸಿ ಬಿಡ್ತಾರೆ. ದಲಿತರ ಭೂಮಿ ಖರೀದಿ ಮಾಡಿ ಮೋಸ ಮಾಡುತ್ತಿದ್ದೀರಾ. ನೀವು ಒಬ್ಬ ಸಮಾಜವಾದಿ ಆದರೆ, ಆ ನಿವೇಶನ ಅವರಿಗೆ ವಾಪಸ್‌ ಮಾಡಿ. ಸುಮಾರು ೧೦ ಸಾವಿರ ಕೋಟಿ ಅಕ್ರಮ ನಡೆದಿದೆ. ಪೊಲೀಸರು ಇದನ್ನ ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.