Mysore
26
light rain

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಚಿವ ಭೈರತಿ ಸುರೇಶ ರಾಜೀನಾಮೆ ಪಡೆಯಿರಿ: ಶಾಸಕ ಶ್ರೀವತ್ಸ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅದ್ವಾನಗಳಿಗೆಲ್ಲಾ ಸಚಿವರೇ ಕಾರಣರಾಗಿದ್ದು, ಸಂಜೆ ಒಳಗಾಗಿ ಸಚಿವ ಭೈರತಿ ಸುರೇಶ್‌ ಅವರ ರಾಜೀನಾಮೆ ಪಡೆಯಬೇಕು ಎಂದು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.

ನಗರದಲ್ಲಿ ಮುಡಾ ಹಿಂದಿನ ಆಯುಕ್ತ ದಿನೇಶ್‌ ಕುಮಾರ್‌ ಅಮಾನತು ವಿಚಾರ ಸಂಬಂಧ ಮಾತನಾಡಿರುವ ಅವರು ಸರ್ಕಾರವೇ ತಮ್ಮ ಆದೇಶದಲ್ಲಿ ಅಕ್ರಮವಾಗಿ ಸೈಟು ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ದಿನೇಶ್‌ ಅಮಾನತು ಜೊತೆಗೆ ಸಚಿವ ಭೈರತಿ ಸುರೇಶ್‌ ಅವರ ರಾಜೀನಾಮೆಯನ್ನು ಸಂಜೆಯೊಳಗೆ ಪಡೆಯಬೇಕು. ದಿನೇಶ್‌ ಅವರ ಅಮಾನತು ಮಾತ್ರವಲ್ಲದೇ ಸಂಬಂಧಪಟ್ಟ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಯಾಗಿಸಬೇಕು ಎಂದರು.

Tags:
error: Content is protected !!