Mysore
68
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಸರ್ಕಾರವೇ ಕಾಲ್ತುಳಿತ ಪ್ರಕರಣದ ನೈತಿಕ ಹೊಣೆ ಹೊರಬೇಕು: ಶಾಸಕ ಶ್ರೀವತ್ಸ ಆಗ್ರಹ

mla shrivathsa

ಮೈಸೂರು: ರಾಜ್ಯ ಸರ್ಕಾರವೇ ಕಾಲ್ತುಳಿತ ಪ್ರಕರಣದ ನೈತಿಕ ಹೊಣೆ ಹೊರಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ. ಪೂರ್ವ ತಯಾರಿ ಕೊರತೆಯಿಂದಾಗಿ ಅವಘಡವಾಗಿದ್ದು, ಸರ್ಕಾರ ಘಟನೆಯ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಇನ್ನು 11 ಮಂದಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಮೃತರ ಕುಟುಂಬಕ್ಕೆ ಆಗಿರುವ ನೋವಿನ ಶಾಪ ಇವರಿಗೆ ತಟ್ಟುತ್ತೆ. ನಿನ್ನೆಯ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ಕಾಣುತ್ತಿತ್ತು. ಅವರ ಮಕ್ಕಳು, ಮೊಮ್ಮಕ್ಕಳಿಗೆ ಆಟಗಾರರ ಜೊತೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಕೊಟ್ಟಿದ್ದರು. ಹೀಗಾಗಿ ಸಾವಿನ ಹೊಣೆಯನ್ನು ಸಿಎಂ ಹಾಗೂ ಡಿಸಿಎಂ ಅವರೇ ಹೊರಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:- ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಡಿಸಿಎಂ ಡಿಕೆಶಿ ಕಾರಣ: ಜೆಡಿಎಸ್‌ ಆರೋಪ

ಇನ್ನು ಮುಂದುವರಿದು ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಮರ್ಯಾದೆಯನ್ನು ದೇಶದಲ್ಲಿ ಕಳೆದಿದ್ದಾರೆ. ಬೇರೆ ರಾಜ್ಯಗಳಲ್ಲಿ ಐಪಿಎಲ್ ಕಪ್ ಗೆದ್ದಾಗ ವ್ಯವಸ್ಥಿತವಾಗಿ ಮಾಡಿದ್ದಾರೆ. ಈಗಾಗಲೇ ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ ಹಾಗೂ ಗೃಹ ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಮಹಾಕುಂಭಮೇಳದಲ್ಲಿ ಆದ ಘಟನೆ ಕುರಿತು ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ ನಿನ್ನೆ ಪೊಲೀಸ್ ಭದ್ರತೆಯನ್ನು ಸರಿಯಾಗಿ ಮಾಡದೇ ಸಂಭ್ರಮಾಚರಣೆಗೆ ಆಹ್ವಾನ ಮಾಡಿರುವುದು ಅವೈಜ್ಞಾನಿಕ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tags:
error: Content is protected !!