Mysore
25
few clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ವಾರ್ಡ್‌ ನಂ.2ರಲ್ಲಿ ಪಾದಯಾತ್ರೆ ನಡೆಸಿ ಜನರ ಸಮಸ್ಯೆ ಆಲಿಸಿದ ಶಾಸಕ ಕೆ.ಹರೀಶ್‌ ಗೌಡ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ನಂಬರ್.‌2ರಲ್ಲಿ ಶಾಸಕ ಕೆ.ಹರೀಶ್‌ ಗೌಡ ಅವರಿಂದು ಪಾದಯಾತ್ರೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ವಾರದ ಮೊದಲ ದಿನ ಪ್ರತಿ ವಾರವೂ ಒಂದೊಂದು ವಾರ್ಡ್‌ಗೆ ಭೇಟಿ ನೀಡಲಿರುವ ಶಾಸಕ ಹರೀಶ್‌ ಗೌಡ ಅವರು, ಇಂದು ಬೆಳಿಗ್ಗೆ ವಾರ್ಡ್‌ ನಂಬರ್‌ 2ಕ್ಕೆ ಭೇಟಿ ನೀಡಿ ಮಂಚೇಗೌಡನಕೊಪ್ಪಲಿನ ಜನರ ಸಮಸ್ಯೆ ಆಲಿಸಿದರು.

ಉಮಾಮಹೇಶ್ವರಿ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆಯು, ಸರ್ಕಾರಿ ಪ್ರೌಢಶಾಲೆಯ ಹಿಂಭಾಗದ ರಸ್ತೆ ಮಾರ್ಗವಾಗಿ ಪ್ರತಿಮ ನ್ಯಾಯಬೆಲೆ ಅಂಗಡಿ, ಮರಿಗೌಡರ ಮನೆ ಮುಂದಿನ ರಸ್ತೆ, ಸಂಗಮ್‌ ವೃತ್ತದ ಆಟದ ಮೈದಾನದ ಕಡೆ ಸಾಗಿತು. ಬಳಿಕ ಶಾಸಕ ಹರೀಶ್‌ ಗೌಡ ಅವರು, ಸ್ಥಳದಲ್ಲಿದ್ದ ಸ್ಥಳೀಯ ಒಳಚರಂಡಿಯನ್ನು ಪರಿಶೀಲನೆ ನಡೆಸಿದರು.

ಪ್ರಮುಖ ವೃತ್ತಗಳ ಬಳಿ ಸಾರ್ವಜನಿಕ ಸಭೆ ನಡೆಸಿದ ಅವರು, ಜನರಿಂದ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ವಾರ್ಡ್‌ನಲ್ಲಿ ಯುಜಿಡಿ ಹಳೆಯದಾಗಿದ್ದು, ಅನೇಕ ಸಮಸ್ಯೆಗಳಿರುವ ಬಗ್ಗೆ ಸಾರ್ವಜನಿಕರು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

Tags:
error: Content is protected !!