Mysore
23
haze

Social Media

ಶುಕ್ರವಾರ, 30 ಜನವರಿ 2026
Light
Dark

ಸಾವಿನಲ್ಲೂ ರಾಜಕೀಯ ಮಾಡೊರು ಮೂರ್ಖರು : ಶಾಸಕ ಹರೀಶ್‌ ಗೌಡ

ಮೈಸೂರು : ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಲ್ಲಿ ಮೃತಪಟ್ಟವರೆಲ್ಲಾ ತುಂಬ ಚಿಕ್ಕ ವಯಸ್ಸಿನವರು. ಹೀಗಾಗಿ ಸರ್ಕಾರ ಪರಿಹಾರವನ್ನು 10 ರಿಂದ 25 ಲಕ್ಷಕ್ಕೆ ಏರಿಕೆ ಮಾಡಿದೆ ಎಂದು ಶಾಸಕ ಕೆ.ಹರೀಶ್‌ ಗೌಡ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಟೀಕೆ ಮಾಡೊರೆಲ್ಲಾ ಮಾಡಲಿ. ಮೃತ ಕುಟುಂಬಗಳಿಗೆ ಸರ್ಕಾರ ಏನು ಮಾಡಬೇಕು ಅದನ್ನೆಲ್ಲಾ ಮಡುತ್ತಿದೆ ಎಂದು ಹೇಳಿದರು.

ಸಾವಿನಲ್ಲೂ ರಾಜಕೀಯ ಮಾಡೊರೋ ಮೂರ್ಖರು. ವಾಸ್ತವಾಂಶ ಜನರಿಗೆ ಗೊತ್ತಿದೆ. ಅನಿರೀಕ್ಷಿತವಾಗಿ ನಡೆದಿರುವ ಘಟನೆಯನ್ನು ವಿಪಕ್ಷದವರು ದೊಡ್ಡದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ ಆಗಲಿಲ್ವಾ.? ನಾವೇನಾದ್ರೂ ಕೇಳಿದ್ವಾ.? ಪೆಹಲ್ಗಾಮ್ ನಲ್ಲಿ ನಡೆದ ಘಟನೆಯ ಇವರ ವೈಫಲ್ಯ ನಾವು ಪ್ರಶ್ನಿಸಿದ್ವಾ.? ಏನೋ ಆಗ ಬಾರದ ಘಟನೆ ಆಗೋಗಿದೆ ಅದಕ್ಕೆ ಎಲ್ಲರ ವಿಷಾದವಿದೆ ಎಂದರು.

ಎಚ್.ಡಿ ಕುಮಾರಸ್ವಾಮಿ ಅವರಿಗೆ ಡಿಕೆ ಶಿವಕುಮಾರ್ ಕನಸಿನಲ್ಲೂ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಅದಕ್ಕೆ ಯಾವಾಗ ನೋಡಿದ್ರು ಡಿಕೆಶಿ ಅವರ ಜಪ ಮಾಡುತ್ತಿರುವುದು. ಎಲ್ಲಿ ಹೋಗಲಿ ಬರಲಿ ಡಿಕೆಶಿ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಇವರ ಟೀಕೆಗಳಿಗೆ ನಮ್ಮ ಡಿಸಿಎಂ ಡಿಕೆಶಿ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

Tags:
error: Content is protected !!