ಮೈಸೂರು: ಆರ್‌ಸಿಬಿ ಆಟಗಾರರಿಗೆ ಸರ್ಕಾರದ ವತಿಯಿಂದ ದೊಡ್ಡ ಮಟ್ಟದ ಸನ್ಮಾನ ಮಾಡಲಾಗುತ್ತದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿಹಿಡಿದಿದೆ.
ಇದನ್ನೂ ಓದಿ:- ಐಪಿಎಲ್ ಟ್ರೋಫಿ ಹೊತ್ತು ಬೆಂಗಳೂರಿಗೆ ಬರುತ್ತಿರುವ ಆರ್‌ಸಿಬಿ ಚಾಂಪಿಯನ್ಸ್
ಈ ಕುರಿತು ಮೈಸೂರಿನಲ್ಲಿ ಸಂತಸ ವ್ಯಕ್ತಪಡಿಸಿದ ಶಾಸಕ ಹರೀಶ್ ಗೌಡ ಅವರು, ನಾವು ಅಮೃತೇಶ್ವರ ದೇವಸ್ಥಾನದಲ್ಲಿ ದುರ್ಗಾ ಹೋಮ, ವಿಶೇಷ ಪೂಜೆ ಮಾಡಿಸಿ ಆರ್‌ಸಿಬಿ ಗೆದ್ದು ಬರಲಿ ಎಂದು ದೇವರ ಮೊರೆ ಹೋಗಿದ್ದೆವು. ದೇವರು ಆರ್‌ಸಿಬಿಗೆ ಆಶೀರ್ವಾದ ಮಾಡಿದ್ದಾನೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಕ್ರಿಕೆಟ್ ಪ್ರೇಮಿ. ಆದ್ದರಿಂದ ಆರ್‌ಸಿಬಿ ಆಟಗಾರರಿಗೆ ಸರ್ಕಾರದ ವತಿಯಿಂದ ದೊಡ್ಡ ಮಟ್ಟದ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.





