ಕೂರ್ಗಳ್ಳಿ ಗ್ರಾಮದ ಕೆರೆ ಅಭಿವೃದ್ದಿ, ಗಿಡ ನೆಡುವ ಕಾರ್ಯಕ್ಕೆ ಚಾಲನೆ
ಮೈಸೂರು: ಜಗತ್ತಿನಲ್ಲಿ ತಾಪಮಾನ,ಹವಾಮಾನ ವೈಪರೀತ್ಯದ ಬದಲಾವಣೆಗಳಾಗುತ್ತಿರುವುದರಿಂದ ಸಮಸ್ಯೆಗಳು ಎದುರಾಗುತ್ತಿವೆ. ನಾವು ಅಭಿವೃದ್ದಿ ಜತೆಗೆ ನೈಸರ್ಗಿಕವಾಗಿ ಬಂದಿರುವ ಸಂಪನ್ಮೂಲ ಉಳಿಸಿಕೊಳ್ಳಬೇಕು. ಮನುಷ್ಯ ಪರಿಸರ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅರಿಯದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.
ಮೈಸೂರು ಹೊರವಲಯದ ಕೂರ್ಗಳ್ಳಿ ಗ್ರಾಮದಲ್ಲಿ ಆಟೋಮೋಟಿವ್ ಆಕ್ಸಲ್ ಲಿಮಿಟೆಡ್, ನಗರಸಭೆ, ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆರೆಯ ಅಭಿವೃದ್ದಿ, ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛ ಗಾಳಿ,ಸ್ವಚ್ಛ ಸಮಾಜ ಇರಬೇಕಾದರೆ ನಮ್ಮ ಸುತ್ತಲೂ ಗಿಡ, ಮರಗಳು ಇರಬೇಕು. ಅದರೊಂದಿಗೆ ನಾವೆಲ್ಲರೂ ಇದ್ದರೆ ಉಸಿರಾಡಿಕೊಂಡು ಇರಬಹುದು ಎಂದರು.
ವೈಜ್ಞಾನಿಕವಾಗಿ ನಾವು ಮುಂದುವರಿದಿದ್ದೇವೆ. ಆದರೆ, ಉಸಿರಾಡಲು ಪೂರಕವಾಗುವಂತೆ ಗಾಳಿ ದೊರೆಯಲು ಹಿಂದಿನವರು ಸಾಲು ಮರಗಳನ್ನು ನೆಡುವಂತೆ ಮಾಡಿದ್ದರು. ಇದರಿಂದಾಗಿ ದೊಡ್ಡ ದೊಡ್ಡಮರಗಳನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ನಾನು ಸಹಕಾರ ಸಚಿವನಾಗಿದ್ದಾಗ ವಿಧಾನಸಭಾದ್ಯಕ್ಷ ಕೆ.ಆರ್ ಪೇಟೆ ಕೃಷ್ಣ, ವಿಧಾನ ಪರಿಷತ್ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರೊಂದಿಗೆ ಸಮಾಲೋಚಿಸಿ ಸಾಲು ಮರದ ತಿಮ್ಮಕ್ಕ ಅವರನ್ನು ಮೈಸೂರಿಗೆ ಕರೆತಂದು ಒಂದೇ ದಿನದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವಂತೆ ಮಾಡಿದೆ. ಶಾಲೆ,ಆಸ್ಪತ್ರೆ,ರಸ್ತೆಗಳು,ಪಾರ್ಕ್‌ಗಳು ಮೊದಲಾದ ಕಡೆಗಳಲ್ಲಿ ಒಂದೇ ಒಂದು ದಿನ ಲಕ್ಷ ಗಿಡ ನೆಡುವಂತೆ ನೋಡಿಕೊಂಡಿದ್ದೆ. ಅದೇ ರೀತಿ ಜಿಪಂ ಅಧ್ಯಕ್ಷನಾಗಿದ್ದಾಗ ಮೈಸೂರಿನಿಂದ ಕುಶಾಲನಗರ, ಕೆ.ಆರ್.ನಗರ, ಹುಣಸೂರಿನಿಂದ ಹನಗೋಡು ತನಕ ಮರಗಳನ್ನು ನೆಡುವಂತೆ ಮಾಡಿದ್ದರಿಂದ ದೊಡ್ಡದಾಗಿ ಬೆಳೆದು ಬೈಕ್‌ನಲ್ಲಿ ಹೋಗುವವರಿಗೆ ಆನಂದ ಕೊಡಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಗರದ ರಿಂಗ್ ರಸ್ತೆಯಲ್ಲಿ ಬೆಳೆದಿರುವ ಬೇವಿನ ಮರಗಳು ಇಂದು ನೆರಳು ಮತ್ತು ತೇವಾಂಶ ಕೊಡುತ್ತದೆ. ಕುಟುಂಬ ನೆಮ್ಮದಿಯಿಂದ ಇದ್ದಾರೆ. ಸಾಮಾಜಿಕವಾಗಿ ಮಾಡಿರುವ ಕೆಲಸಗಳು ಖುಷಿ ತಂದುಕೊಡಲಿದೆ. ಮರಗಳು ನಮ್ಮ ಆರೋಗ್ಯ, ರಕ್ಷಣೆ ಮಾಡುತ್ತವೆ ಎಂದರು.
ಇಂದು ನದಿಗಳು ಕಲ್ಮಶಗೊಳ್ಳುತ್ತಿದೆ. ನಾವು ಶುದ್ದ ನೀರು ಕುಡಿಯುತ್ತಿದ್ದೇವೆ ಎನ್ನುವಂತೆ ಹೇಳಿದರೂ ಕಲುಷಿತ ನೀರು ಸೇವನೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೆಆರ್‌ಎಸ್ ನೀರು ಕುಡಿಯುತ್ತಿದ್ದರೂ ಲಕ್ಷ್ಮಣತೀರ್ಥ ನದಿಯ ಕಲುಷಿತ ಅಂಶಗಳು ಸೇರಿಕೊಂಡು ಬಿಡುತ್ತಿದೆ. ಈ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದೇನೆ. ನದಿಗಳಿಗೆ ವಿಷಕಾರಕ ವಸ್ತುಗಳು ಸೇರದಂತೆ ನೋಡಿಕೊಳ್ಳಬೇಕು. ಪರಿಸರದ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ನಗರಪಾಲಿಕೆಯಂತೆ ನಗರಸಭೆ,ಪಟ್ಟಣ ಪಂಚಾಯಿತಿಗಳಲ್ಲಿ ಹಸಿಕಸ-ಒಣಕಸ ಬೇರ್ಪಡಿಸಿ ಸ್ವಚ್ಛತೆ ಕಾಪಾಡಬೇಕು. ಹುಟ್ಟಿದ ಮೇಲೆ ಸಮಾಜಕ್ಕೆ ಸಾರ್ಥಕವಾದ ಕೆಲಸಗಳನ್ನು ಮಾಡಬೇಕು.ಮನೆಗಳನ್ನು ಒಂದು ಮರ ನೆಟ್ಟು,ಮತ್ತೊಂದು ಮರವನ್ನು ನೆಡುವಂತೆ ಪ್ರೇರೇಪಿಸಬೇಕು. ಆಟೋಮ್ಯಾಟಿವ್ ಆಕ್ಸಲ್ ಲಿಮಿಟೆಡ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೂರ್ಗಳ್ಳಿ ಕೆರೆ ಅಭಿವೃದ್ದಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಕಂಪನಿಯಲ್ಲಿ ಯಾವುದೇ ದೂರುಗಳು,ವಿಚಾರಗಳು ಬಾರದಂತೆ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಕಾರ್ಮಿಕರ ಹಿತದ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವುದರಿಂದ ಒಳ್ಳೆಯದಾಗಲಿದೆ ಎಂದರು.
ಇದರಿಂದಾಗಿ ನನ್ನ ಮನಸ್ಸಿಗೆ ತಯಂಬಾ ನೋವಾಗಿತ್ತು. ಹಾಗಾಗಿ, ಅಭಿವೃದ್ದಿ ದೃಷ್ಟಿಯಿಂದ ಏನಾದರೂ ಮಾಡಬೇಕೆಂಬ ಕಾರಣಕ್ಕಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ನಗರಸಭೆ, ನಾಲ್ಕುಪಟ್ಟಣ ಪಂಚಾಯಿತಿ ರಚನೆಯಾಗುವಂತೆ ಮಾಡಿಸಿದೆ ಎಂದು ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದು. ಮೈಸೂರು ನಗರದ ಸುತ್ತಲೂ ನಲವತ್ತು ಕಿ.ಮೀ ಪಸರಿಸಿಕೊಂಡು ಬೆಳೆದಿದೆ.
ನಗರಸಭೆ,ಪಟ್ಟಣ ಪಂಚಾಯಿತಿಗಳನ್ನಾಗಿಐಎಎಸ್ ಅಧಿಕಾರಿಗಳ ಬಳಿ ರಾತ್ರಿ ಎರಡು ಗಂಟೆಯ ತನಕ ಕಾದು ಕುಳಿತುಕೊಳ್ಳುತ್ತಿದ್ದೆ. ಇಂದು ಅಭಿವೃದ್ದಿ ಕೆಲಸ ಸುಗಮವಾಗಿ ನಡೆಯುತ್ತಿದೆ ಎಂದು ನುಡಿದರು.
ಮುಡಾದಲ್ಲಿ ಖಾತೆ,ಕಂದಾಯ,ನಕ್ಷೆ ಅನುಮೋದನೆ,ಪ್ಲಾನ್ ಅನುಮೋದನೆ ಮಡುತ್ತಿದ್ದರೂ ಸರ್ಕಾರ ಹೊರಡಿಸಿದ ಒಂದು ಆದೇಶದಿಂದ ಆರು ವರ್ಷಗಳಿಂದ ಒಂದೇ ಒಂದು ಬಡಾವಣೆಗೆ ರಸ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ೩೦೦ ಕೋಟಿ ರೂ.ಮಂಜೂರು ಮಾಡಿಸಿ ಒಂದೇ ಸಮಯದಲ್ಲಿ ಕಾಮಗಾರಿ ಮಾಡಿಸಲು ಕ್ರಮ ಕೈಗೊಂಡಿದ್ದರಿಂದ ರಸ್ತೆಗಳ ನಿರ್ಮಾಣಕ್ಕೆ ಕಾರಣವಾಯಿತು ಎಂದರು.
ಆಟೋಮೋಟಿವ್ ಆಕ್ಸಲ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುರುಳಿ ಕೃಷ್ಣ, ನಾಗರಾಜು ಗರ್ಗೇಶ್ವರಿ, ರಂಗನಾಥ್, ಮನ್ಮಥ್, ಕೂರ್ಗಳ್ಳಿ ಪೌರಾಯುಕ್ತ ಎಚ್.ಬಿ. ಚಂದ್ರಶೇಖರ್,ಆರ್‌ಎಫ್‌ಒಗಳಾದ ಸುಂದರ್,ಸ್ವಾಮಿ, ಮುಖಂಡರಾದ ಅಭಿಜ್ಞಾ, ನಂಜುಂಡೇಗೌಡ, ಸತೀಶ್,ರಾಮು,ಕುಮಾರ್,ಮಲ್ಲೇಶ್, ವಾಸು, ಚಂದ್ರಶೇಖರ್, ಮೂರ್ತಿ, ಮೈದನಹಳ್ಳಿ ಚಂದ್ರಶೇಖರ್, ಪರಿಸರ ತಜ್ಞ ಮನೋಜ್ ಪಾಟೀಲ್,ಪರಿಸರ ಇಂಜಿನಿಯರ್ ಗಿರಿಜಾ ಮತ್ತಿತರರು ಹಾಜರಿದ್ದರು.
ಆಟೋಮೋಟಿವ್ ಆಕ್ಸಲ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುರುಳಿ ಕೃಷ್ಣ, ನಾಗರಾಜು ಗರ್ಗೇಶ್ವರಿ, ರಂಗನಾಥ್, ಮನ್ಮಥ್, ಕೂರ್ಗಳ್ಳಿ ಪೌರಾಯುಕ್ತ ಎಚ್.ಬಿ. ಚಂದ್ರಶೇಖರ್,ಆರ್‌ಎಫ್‌ಒಗಳಾದ ಸುಂದರ್,ಸ್ವಾಮಿ, ಮುಖಂಡರಾದ ಅಭಿಜ್ಞಾ, ನಂಜುಂಡೇಗೌಡ, ಸತೀಶ್,ರಾಮು,ಕುಮಾರ್,ಮಲ್ಲೇಶ್, ವಾಸು, ಚಂದ್ರಶೇಖರ್, ಮೂರ್ತಿ, ಮೈದನಹಳ್ಳಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.





