Mysore
22
haze

Social Media

ಗುರುವಾರ, 18 ಡಿಸೆಂಬರ್ 2025
Light
Dark

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನಾನು ದಲಿತ ವಿರೋಧಿಯಲ್ಲ ಎಂದ ಶಾಸಕ ಜಿ.ಟಿ.ದೇವೇಗೌಡ

gt deve gowda

ಮೈಸೂರು: ವಿಧಾನಸಭೆಯಲ್ಲಿ ನಾನು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ದಲಿತರನ್ನು ವಿರೋಧಿಸಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1970ನೇ ಇಸವಿಯಿಂದಲೂ ಸಹಕಾರಿ ಕ್ಷೇತ್ರದಲ್ಲಿ ಕಾರ್ಯದರ್ಶಿ ಅಗಿ ನಂತರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದೇನೆ. ವಿಧಾನಸಭೆಯಲ್ಲಿ ನಾನು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಹೇಳಿದ್ದೇನೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ನಾನು ದಲಿತ ವಿರೋಧಿಯಲ್ಲ. ಸಹಕಾರ ಸಂಘಗಳಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಈ ರೀತಿ ಮಾಡುವ ಬದಲು ಸಹಕಾರ ಕ್ಷೇತ್ರವನ್ನು ಮುಚ್ಚಿಬಿಡಿ ಎಂದು ಹೇಳಿದ್ದೆ. ದಲಿತರು ಬಂದ್ರೆ ಮುಚ್ಚಬೇಕಾ ಎಂದು ಶಿವರಾಜ್ ತಂಗಡಗಿ ಹೇಳಿದರು. ನಾನು ನಮ್ಮ ತಂದೆ ಈ ಹಿಂದೆ ದಲಿತರಿಗೆ ಒಂದು ಊರನ್ನೆ ಕಟ್ಟಿಕೊಟ್ಟಿದ್ದೇವೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿಸಿದ್ದೇನೆ. ನಾನು ಯಾವತ್ತು ಜಾತಿ ಮಾಡಿಲ್ಲ. ದಲಿತರನ್ನು ಅಗೌರವವಾಗಿ ಖಂಡಿಲ್ಲ. ಅಡಳಿತ ಪಕ್ಷ ತಂದಿದ್ದ ಕಾಯ್ದೆಯನ್ನು ವಿರೋಧ ಮಾಡಿದ್ದೇನೆ. ಅದನ್ನು ದಲಿತರ ವಿರೋಧಿ ಎಂಬ ರೀತಿ ಬಿಂಬಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಷಡ್ಯಂತ್ರ ಎಂದು ಕಾಂಗ್ರೆಸ್‌ನವರೇ ಹೇಳಿದ್ದಾರೆ. ಸರ್ಕಾರ ಎಸ್‌ಐಟಿ ತನಿಖೆ ಮಾಡಿಸುತ್ತಿದೆ. ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ಹೋಗಬೇಕು. ಧರ್ಮಸ್ಥಳಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಕನ್ನಡನಾಡಿಗೆ ಹಾಗೂ ಜನರಿಗೆ ನೋವಾಗಿದೆ. ಆದ್ದರಿಂದ ತನಿಖೆ ಶೀಘ್ರವಾಗಿ ನಡೆಸಬೇಕು. ತಪ್ಪಿಸ್ಥತರನ್ನು ನೇಣಿಗೆ ಹಾಕಬೇಕು. ಜನರ ಮನಸ್ಸಿಗೆ ನೆಮ್ಮದಿ ನೀಡಬೇಕು. ಧರ್ಮಸ್ಥಳ ಯಾವುದೇ ಕಾರಣಕ್ಕೂ ಟಾರ್ಗೆಟ್ ಆಗಲ್ಲ. ವೀರೇಂದ್ರ ಹೆಗಡೆ ಕೂಡ ಟಾರ್ಗೆಟ್ ಆಗಲ್ಲ. ಸತ್ಯ ಹೊರ ಬರುತ್ತೆ ಸತ್ಯವೇ ಉಳಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಲೇಖಕಿ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರತಿವರ್ಷ ಒಬ್ಬೊಬ್ಬ ಸಾಧಕರಿಂದ ಉದ್ಘಾಟನೆ ಮಾಡಿಸುತ್ತಾರೆ. ಅದಕ್ಕಾಗಿ ಒಂದು ಹೈ ಪವರ್ ಕಮಿಟಿ ಮಾಡಿದ್ದೇವೆ. ಸಿಎಂಗೆ ಅದರ ಪವರ್ ಕೊಟ್ಟಿದ್ದೇವೆ. ಭಾನು ಮುಸ್ತಾಕ್ ಆಯ್ಕೆ ಮಾಡಿರೋದು ಸಿಎಂ ಎಂದು ಹೇಳಿದರು.

ಇನ್ನು ಬಾನು ಮುಷ್ತಾಕ್‌ಗೆ ದೇವರ ಮೇಲೆ ನಂಬಿಕೆ ಇಲ್ಲ ಎಂಬ ಬಿಜೆಪಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದೆ ಇದ್ರೆ ಅವರು ಬರಲ್ಲ. ನಂಬಿಕೆ ಇದ್ರೆ ಬಂದು ಉದ್ಘಾಟನೆ ಮಾಡ್ತಾರೆ ಎಂದರು.

Tags:
error: Content is protected !!