Mysore
19
clear sky

Social Media

ಗುರುವಾರ, 15 ಜನವರಿ 2026
Light
Dark

ಲೋಕಾ ವರದಿ ಟೀಕಿಸುವ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ: ಸಚಿವ ಭೈರತಿ ಸುರೇಶ್‌ ಕಿಡಿ

ಮೈಸೂರು: ಮುಡಾ ಹಗರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಪ್ರತಿಕ್ರಿಯೆ ನೀಡಿದ್ದು, ಲೋಕಾಯುಕ್ತ ವರದಿ ಟೀಕೆ ಮಾಡುವ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ತಪ್ಪು ಮಾಡಿದ್ರೆ ಚಾಮುಂಡೇಶ್ವರಿ ಬಳಿ ಆಣೆ ಮಾಡುತ್ತೇನೆ ಬನ್ನಿ ಎಂದಿದ್ದೆ. ಆಣೆ ಪ್ರಮಾಣಕ್ಕೆ ಅವರು ಬರಲಿಲ್ಲ. ಲೋಕಾಯುಕ್ತ ಕೊಟ್ಟಿರುವ ರಿಪೋರ್ಟ್‌ಗೂ ನಮಗೂ ಸಂಬಂಧವಿಲ್ಲ. ಪ್ರಕರಣದಲ್ಲಿ ಯಾವುದೇ ತಪ್ಪು ಕಾಣಿಸಿಲ್ಲ, ಅದನ್ನೇ ಬಿ ರಿಪೋರ್ಟ್ ಮಾಡಿದ್ದಾರೆ. ಲೋಕಾಯುಕ್ತ ವರದಿಯನ್ನು ನಾನು ಸ್ವಾಗತಿಸುತ್ತೇನೆ. ಮುಡಾ ಹಗರಣದಲ್ಲಿ ನಾನಾಗಲಿ, ಸಿಎಂ ಆಗಲಿ ಯಾವುದೇ ತಪ್ಪು ಮಾಡಿಲ್ಲ. ಲೋಕಾಯುಕ್ತರು ಸತ್ಯ ಸತ್ಯತೆ ಕಂಡು ಹಿಡಿದಿದ್ದಾರೆ. ಅವರಂತೆ ಇಡಿ ಅಧಿಕಾರಿಗಳು ಸಹ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ಇನ್ನು 50:50 ಸೈಟ್ ತಗೊಂಡಿರೋದು ಸರಿ ತಪ್ಪು ಎಂದು ಹೇಳೋದಿಲ್ಲ. ಜಾಗ ಕಳೆದುಕೊಂಡಿರುವವರಿಗೆ ಅನ್ಯಾಯ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.

 

Tags:
error: Content is protected !!