ಮೈಸೂರು: ಜಾತಿಗಣತಿ ವೈಜ್ಞಾನಿಕವಾಗಿದ್ದು, ಇದರಲ್ಲಿ ಯಾವುದೇ ಲೋಪದೋಷವಾಗಿಲ್ಲ ಎಂದು ಮಾಜಿ ಮೇಯರ್ ಅಯೂಬ್ ಖಾನ್ ಹೇಳಿದ್ದಾರೆ.
ಜಾತಿಗಣತಿ ವೈಜ್ಞಾನಿಕವಾಗಿಲ್ಲ. ಯಾವುದೇ ಸಮೀಕ್ಷೆ ಮಾಡದೇ ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಆಡುತ್ತಿರುವ ನಾಟಕ ಎಂದು ಬಿಜೆಪಿ ನಾಯಕರು ಪದೇ ಪದೇ ಜಾತಿಗಣತಿ ವರದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮೇಯರ್ ಅಯೂಬ್ ಖಾನ್ ಅವರು, ಜಾತಿಗಣತಿ ವೈಜ್ಞಾನಿಕವಾಗಿದೆ, ಯಾವುದೇ ಲೋಪವಾಗಿಲ್ಲ. ಇದು ನಿನ್ನೆ ಮೊನ್ನೆ ಮಾಡಿರುವ ವರದಿ ಅಲ್ಲ. ಸಿದ್ದರಾಮಯ್ಯ ಅವರು ಹತ್ತು ವರ್ಷಗಳ ಹಿಂದೆ ಮಾಡಿಸಿದ ಒಂದು ಸರ್ವೆ ಇದು. ಅದನ್ನ ಈಗ ಮಂಡಿಸಲಿಕ್ಕೆ ಹೊರಟಿದ್ದಾರೆ. ಇದನ್ನು ನಾವು ಸ್ವಾಗತ ಮಾಡ್ತೇವೆ. ಮುಂದಿನ ದಿನಗಳಲ್ಲಿ ಸಿಎಂ ಸಾಹೇಬರು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ಇದೆ.
ಮುಸಲ್ಮಾನ ಒಂದನೇ ಸ್ಥಾನಕ್ಕೆ ಬರಬೇಕು ಎರಡನೇ ಸ್ಥಾನಕ್ಕೆ ಬರಬೇಕು ಎಂದು ಎಲ್ಲೂ ಅರ್ಜಿ ಕೊಟ್ಟಿಲ್ಲ. ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ನಮ್ಮ ಜನಸಂಖ್ಯೆ ಇದೆ ಇದು ಸ್ವಾಗತಾರ್ಹ. ಎಲ್ಲಾ ವೈಜ್ಞಾನಿಕ ನಡೆದಿದೆ ರಿಯಲಾಸ್ಟಿಕ್ ಆಗಿದೆ. ಅದನ್ನ ನಾವು ಗೌರವಿಸಬೇಕು. ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದರು.





