Mysore
35
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಎಂಸಿಡಿಸಿಸಿ ಆಡಳಿತ ಮಂಡಳಿ ಚುನಾವಣೆ ಪಾರದರ್ಶಕವಾಗಿ ನಡೆಯಬೇಕಿದೆ: ಶಾಸಕ ಜಿ ಡಿ ಹರೀಶ್ ಗೌಡ

ಮೈಸೂರು: ಎಂಸಿಡಿಸಿಸಿ ಆಡಳಿತ ಮಂಡಳಿ ಚುನಾವಣೆ ಪಾರದರ್ಶಕವಾಗಿ ನಡೆಯಬೇಕಿದೆ ಎಂದು ಶಾಸಕ ಜಿ ಡಿ ಹರೀಶ್ ಗೌಡ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆಗೆ ಎರಡು ದಿನಗಳಿರುವಾಗ ಮತದಾರರು ಮತದಾನ ಮಾಡುವ ಹಕ್ಕನ್ನು ಕಸಿಯುವ ಯತ್ನ ನಡೆದಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸರ್ಕಾರ ಅಧಿಕಾರ ಬಳಸಿಕೊಂಡು ಒತ್ತಡ ಹೇರುವುದು ಸರಿಯಲ್ಲ. ಚುನಾವಣೆ ತಡೆಯುವ ವ್ಯವಸ್ಥಿತ ಹುನ್ನಾರ ನಡೆದಿದೆ. ಮತದಾರರ ಹಕ್ಕು ಕಸಿಯುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

ಇನ್ನು ಸಹಕಾರಿ ಕ್ಷೇತ್ರವನ್ನು ಉಳಿಸುವ ಸಲುವಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ರಾಜಕೀಯ ಕಾರಣಗಳಿಗೋಸ್ಕರ ಸಹಕಾರಿ ಕ್ಷೇತ್ರ ಹಾಳಾಗಬಾರದು. ನಾನು ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಎರಡೂ ಜಿಲ್ಲೆಗಳ ರೈತರನ್ನು ಸಮಾನವಾಗಿ ಕಂಡಿದ್ದೇನೆ. ಎರಡೂ ಜಿಲ್ಲೆಗಳ ರೈತರಿಗೆ ಸಾಲ ನೀಡಿದ್ದೇನೆ.

ಆದರೆ ಕಳೆದ‌ ಒಂದೂವರೆ ವರ್ಷದಿಂದ ರೈತರಿಗೆ ಸಮರ್ಪಕವಾಗಿ ಸಾಲ ನೀಡಿಲ್ಲ. ಇದನ್ನು ಸಹಕಾರಿ ಕ್ಷೇತ್ರದ ಮತದಾರರು ಗಮನಿಸುತ್ತಾರೆ.ಯಾವುದೇ ಆಸೆ ಆಮಿಷಗಳಿಗೆ ಮತದಾರರು ಮಣಿಯುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

Tags:
error: Content is protected !!