ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರ ತಲೆದಂಡವಾಗಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತರಾಗಿದ್ದ ನಟೇಶ್ ಹಾಗೂ ದಿನೇಶ್ ರಕ್ಷಣೆಯಾಗಿದೆ. ಈ ಕೂಡಲೇ ಅವರಿಬ್ಬರನ್ನು ಸರ್ಕಾರ ವಜಾ ಮಾಡಬೇಕು ಎಂದು ಅಗ್ರಹಿಸಿದರು.
ಇನ್ನು ಮುಡಾ ಅಧ್ಯಕ್ಷರಾಗಿದ್ದ ಮರೀಗೌಡ ತಲೆದಂಡ ಆಗಿರುವುದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಈ ಮೂಲಕ ನಮಗೆ ಮೊದಲ ಹಂತದಲ್ಲಿ ಗೆಲುವು ಸಿಕ್ಕಿದೆ. ಮುಡಾ ಹಗರಣ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಅವರಿಂದ ನ್ಯಾಯ ಸಿಗದಿದ್ದರೆ ನಾವೆಲ್ಲಾ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ ಎಂದರು.