Mysore
27
broken clouds

Social Media

ಬುಧವಾರ, 28 ಜನವರಿ 2026
Light
Dark

ಮಹಾರಾಜ ಟ್ರೋಫಿ 2024 : ಮೈಸೂರಿನಲ್ಲಿ ಟ್ಯಾಲೆಂಟ್‌ ಹಂಟ್‌

ಮೈಸೂರು: ಟ್ಯಾಲೆಂಟ್‌ ಹಂಟ್‌ನಿಂದ ಆಯ್ಕೆಯಾದ ಇಬ್ಬರು ಆಟಗಾರರು ಈ ವರ್ಷದ ಮಹಾರಾಜ ಟ್ರೋಫಿ 2024ರ ಟೂರ್ನಮೆಂಟ್‌ನಲ್ಲಿ ಮೈಸೂರು ವಾರಿಯರ್ಸ್‌ಅನ್ನು ಪ್ರತಿನಿಧಿಸಲಿದ್ದಾರೆ.

ಮೈಸೂರಿನಲ್ಲಿ ನಡೆದ ಬಹು ನಿರೀಕ್ಷಿತ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್‌ ತಂಡ ಸೇರುವ ಉದ್ದೇಶದಿಂದ 200ಕ್ಕೂ ಹೆಚ್ಚು ಯುವ ಕ್ರಿಕೆಟ್‌ ಆಟಗಾರರು ಭಾಗವಹಿಸಿದ್ದರು.

ಎನ್‌.ಆರ್.ಗ್ರೂಪ್‌, ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2024ರಲ್ಲಿ ಮೈಸೂರು ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸುವ ಯುವ ಆಟಗಾರರನ್ನು ಆಯ್ಕೆ ಮಾಡಲು ಮೈಸೂರಿನ ಎಸ್‌ಡಿಎನ್‌ಆರ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ 55 ಮಧ್ಯಮ ವರ್ಗದ ಬೌಲರ್‌ಗಳು, 50 ಸ್ಪಿನ್ನರ್‌ಗಳು, 40 ಬ್ಯಾಟ್ಸ್‌ಮನ್‌ಗಳು, 40 ಆಲ್‌ರೌಂಡರ್‌ಗಳು ಮತ್ತು 40 ವಿಕೆಟ್‌ ಕೀಪರ್‌ಗಳು ಸೇರಿದಂತೆ ಒಟ್ಟು 200 ಯುವ ಕ್ರಿಕೆಟಿಗರು ಭಾಗಿಯಾಗಿದ್ದರು.

ಆಯ್ಕೆಯಾದ ಇಬ್ಬರು ಆಟಗಾರರು 15 ದಿನಗಳ ಕಠಿಣ ತರಬೇತಿಗೆ ಒಳಗಾಗಿದ್ದಾರೆ. ಆ ಬಳಿಕ ಆಗಸ್ಟ್.‌15ರಿಂದ ಸೆಪ್ಟೆಂಬರ್‌1ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್‌ ತಂಡದ ಪರವಾಗಿ ಆಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್‌ ತಂಡದ ಜೊತೆಗೆ ಹುಬ್ಬಳ್ಳಿ ಟೈಗರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಮಂಗಳೂರು ಡ್ರಾಗನ್ಸ್‌, ಗುಲ್ಬರ್ಗಾ ಮಿಸ್ಟಿಕ್ಸ್‌ ಮತ್ತು ಶಿವಮೊಗ್ಗ ಲಯನ್ಸ್‌ ಒಳಗೊಂಡು ಕರ್ನಾಟಕದ ಒಟ್ಟು ಆರು ತಂಡಗಳು ಸ್ಪರ್ಧಿಸಲಿವೆ.

ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ವಾರಿಯರ್ಸ್‌ ಮಾಲೀಕ ಮತ್ತು ಸೈಕಲ್‌ ಪ್ಯೂರ್‌ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್‌ ರಂಗ ಅವರು, ಎನ್‌.ಆರ್‌ ಗ್ರೂಪ್‌ ಯುವ ಕ್ರಿಕೆಟ್‌ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಒದಗಿಸಿ, ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿ ಅವರು ರಾಜ್ಯವನ್ನು ಪ್ರತಿನಿಧಿಸುವಷ್ಟರ ಮಟ್ಟಿಗೆ ಬೆಳೆಸಲು ಬದ್ಧವಾಗಿದೆ. ಇಂದು ನಾವು ಹಲವು ಪ್ರತಿಭೆಗಳ ಅಸಾಧಾರಣ ಕೌಶಲ್ಯಗಳನ್ನು ನೋಡಿದ್ದೇವೆ. ಅವರು ಮೈಸೂರು ವಾರಿಯರ್ಸ್‌ ತಂಡದ ಪರವಾಗಿ ಆಡಿ ಯಶಸ್ಸು ಗಳಿಸುವುದನ್ನು ನೋಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

Tags:
error: Content is protected !!