Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಡಿಸೆಂಬರ್.‌21ರಂದು ಮೈಸೂರಿನಲ್ಲಿ ಮಾಗಿ ಉತ್ಸವ ಆಯೋಜನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಮನೆ ಆಡಳಿತ ಮಂಡಳಿ ವತಿಯಿಂದ ಡಿಸೆಂಬರ್.‌21ರಂದು ಮಾಗಿ ಉತ್ಸವವನ್ನು ಆಯೋಜನೆ ಮಾಡಲಾಗಿದೆ.

ಮೈಸೂರು ಅರಮನೆ ಆವರಣದಲ್ಲಿ ಮಾಗಿ ಉತ್ಸವ ನಡೆಯಲಿದ್ದು, ಇದಕ್ಕೆ ಡಿಸೆಂಬರ್.‌21ರಂದು ಚಾಲನೆ ಸಿಗಲಿದೆ.

ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದ್ದು, ಈಗಾಗಲೇ ವಿವಿಧ ಬಗೆಯ ಹೂವಿನ ಕುಂಡಗಳನ್ನು ನಿರ್ಮಾಣ ಮಾಡಲಾಗಿದೆ.

ಇನ್ನು ಮಾಗಿ ಉತ್ಸವಕ್ಕೆ ಅರಮನೆ ಆವರಣದ ಪಾರ್ಕ್‌ನಲ್ಲಿ ವಿವಿಧ ಬಗೆತ ಕಲಾಕೃತಿಗಳನ್ನು ಸಹ ನಿರ್ಮಾಣ ಮಾಡಲಾಗಿದೆ.

ಕಲಾಕೃತಿಗಳಲ್ಲಿ ಪ್ರಮುಖವಾಗಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ, ಮುಮ್ಮಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ, ಬಂಡೀಪುರ ಅರಣ್ಯ ಸೇರಿದಂತೆ ಹಲವು ಪ್ರಾಣಿ ಹಾಗೂ ಪಕ್ಷಿಗಳ ಕಲಾಕೃತಿ ನಿರ್ಮಾಣವಾಗಿದೆ.

ಮಾಗಿ ಉತ್ಸವಕ್ಕೆ ನೆರೆಯ ರಾಜ್ಯಗಳು ಹಾಗೂ ಇತರೆ ದೇಶಗಳಿಂದಲೂ ವಿವಿಧ ವಿವಿಧ ಬಗೆಯ ಹೂವುಗಳನ್ನು ಖರೀದಿ ಮಾಡಲಾಗಿದೆ.

ಮೈಸೂರಿನ ಉಮಾಶಂಕರ್‌ ನೇತೃತ್ವದಲ್ಲಿ ಕಲಾ ಕೃತಿಗಳು ನಿರ್ಮಾಣವಾಗುತ್ತಿದ್ದು, ಕಾರ್ಮಿಕರು ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

 

Tags: