Mysore
20
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪ್ರತಾಪ್‌ ಸಿಂಹಗೆ ಅಭಿನಂದನೆ ಸಲ್ಲಿಸಿದ ಎಂ.ಲಕ್ಷ್ಮಣ್‌

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡಿರುವುದಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಬೆಂಬಲ ಸೂಚಿಸಿರುವುದಕ್ಕೆ, ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ತಿಳಿಸಿದ್ದಾರೆ.

ನಗರದಲ್ಲಿ ಇಂದು(ಡಿಸೆಂಬರ್.26)‌ ಕಾಂಗ್ರೆಸ್‌ ಕಚೇರಿಯಲ್ಲಿ ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡುವ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ(ಡಿ.25) ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡಬಹುದು ಎಂದು ಬೆಂಬಲ ಸೂಚಿಸಿರುವುದಕ್ಕೆ ನಾನು ಅಭಿನಂದಿಸುತ್ತೇನೆ. ಪ್ರತಾಪ್‌ ಸಿಂಹ ಬಲಪಂಥೀಯವಾಗಿದ್ದು, ಹತ್ತು ವರ್ಷಗಳ ನಂತರ ಸತ್ಯ ಹೇಳಿದ್ದಾರೆ. ಹೀಗಾಗಿ ಅವರು ಎಲ್ಲಾದರೂ ಸಿಕ್ಕಿದರೆ ನಾನು ಅವರಿಗೆ ಕಾಫಿ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರತಾಪ್‌ ಸಿಂಗಹ ಅವರಿಗೆ ಟಿಕೆಟ್‌ ತಪ್ಪಿದ ಮೇಲೆ ಜ್ಞಾನೋದಯವಾಗಿದೆ. ಈಗಲಾದರೂ ಬಿಜೆಪಿಯ ಹಿಡನ್‌ ಅಜೆಂಡಾ ಗೊತ್ತಾಗಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆಯೇ ಹೊರತು ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಕ್ಕೆ ಅಲ್ಲ. ಬಿಜೆಪಿಯವರು 5 ವರ್ಷ ಅಧಿಕಾರದಲ್ಲಿದ್ದರು ಮೈಸೂರಿಗೆ ಏನು ಕೋಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡುವ ವಿಚಾರ ದೇಶಾದ್ಯಾಂತ ಚರ್ಚೆಯಾಗುತ್ತಿದೆ ಎಂದರೆ ಅದು ಈ ವ್ಯವಸ್ಥೆಯ ದುರ್ದೈವ. ಶಾಸಕ ಕೆ.ಹರೀಶ್‌ ಗೌಡ ಜಿಲ್ಲಾಧಿಕಾರಿ ಕಚೇರಿಗೆ 2.1 ಕಿಲೋ ಮೀಟರ್‌ ರಸ್ತೆ ನಾಮಕರಣಕ್ಕೆ ಪ್ರಸ್ತಾವನೆ ಸಲ್ಲಿಯಾಗುವಂತೆ ಪತ್ರ ಬರೆದಿದ್ದಾರೆ. ಅಲ್ಲದೇ ಕ್ಷೇತ್ರದ ಜನ ಸಾಮಾನ್ಯರಿಂದ ರಸ್ತೆ ನಾಮಕರಣ ವಿಚಾರವಾಗಿ ಮನವಿ ಹೋಗಿದೆ. ಜೊತೆಗೆ ಈ ರಸ್ತೆಯಲ್ಲಿ 10 ಆಸ್ಪತ್ರೆಗಳು ನಿರ್ಮಾಣವಾಗಿವೆ. ಅದಕ್ಕೆ ಸುಮಾರು 1,569 ಕೋಟಿ ರೂಪಾಯಿಗಳನ್ನು ಸಿಎಂ ಸಿದ್ದರಾಮಯ್ಯ ಅವರೇ ಬಿಡುಗಡೆ ಮಾಡಿದ್ದು, ಜಯದೇವ ಆಸ್ಪತ್ರೆ, ಸೂಪರ್‌ ಸ್ಪೆಷಾಲಿಟಿ ಜಿಲ್ಲಾ ಆಸ್ಪತ್ರೆ, ಹೈಟೆಕ್‌ ಪಂಚಕರ್ಮ ಆಸ್ಪತ್ರೆ, ಚರಕ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳು ಸ್ಥಾಪನೆಯಾಗಿವೆ. ಹೀಗಾಗಿ ಸಿದ್ದರಾಮಯ್ಯ ಹೆಸರು ಇತಿಹಾಸ ಪುಟ್ಟದಲ್ಲಿ ಇರಬೇಕೆಂದು ನಮ್ಮ ಮನವಿಯಾಗಿದೆ ಎಂದಿದ್ದಾರೆ.

Tags:
error: Content is protected !!