Mysore
19
overcast clouds
Light
Dark

ಭಗವಂತನ ಸ್ಮರಣೆಯಿಂದ ಬದುಕು ಸಾರ್ಥಕ: ವಿದ್ಯಾಪ್ರಿಯತೀರ್ಥ ಸ್ವಾಮೀಜಿ

ಮೈಸೂರು: ಸದಾ ನಮ್ಮನ್ನು ಸಲಹುತ್ತಿರುವ ಭಗವಂತನ ಧ್ಯಾನ, ಜಪ, ತಪ ಮಾಡುವುದರಿಂದ ನಮ್ಮ ಬದುಕು ಕೂಡಾ ಸಾರ್ಥಕವಾಗುತ್ತದೆ ಎಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ವಿದ್ಯಾಪ್ರಿಯಾತೀರ್ಥ ಸ್ವಾಮೀಜಿ ಹೇಳಿದರು.

ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿಯ ವತಿಯಿಂದ ಭಕ್ತರ ಸಮಕ್ಷಮದಲ್ಲಿ ಮಹಾಮೃತ್ಯುಂಜಯ ಹೋಮ ನೆರವೇರಿತು ಅವರು ಆಶೀರ್ವಚನ ನೀಡಿದರು.

ಭಗವಂತನ ಶಾಂತ ಕೃಪಾದೃಷ್ಟಿ ನಮ್ಮ ಮೇಲೆ ಬೀಳಲಿ ಎನ್ನುವ ಉದ್ದೇಶದಿಂದ ನಾವೆಲ್ಲ ದೇವಸ್ಥಾನಗಳಿಗೆ ಹೋಗುತ್ತೇವೆ. ಭಗವಂತನ ಸ್ಮರಣೆ ಎಷ್ಟು ಮಾಡಿದರೂ ಕಡಿಮೆಯೇ. ಮನುಷ್ಯನ ನೆಮ್ಮದಿಗೆ ಭಗವಂತನೇ ಹಾದಿ ಎಂದರು.

ವಿದ್ಯಾಪ್ರಿಯಾತೀರ್ಥ ಸ್ವಾಮೀಜಿ ಅವರು 7 ದಿನಗಳ ಪ್ರವಚನದ ಮಂಗಳ ನೇರವೆರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷರುಗಳಾದ ರವಿಶಾಸ್ತ್ರಿ ಮತ್ತು ಪಿ ಎಸ್ ಶೇಖರ್, ಕಾರ್ಯದರ್ಶಿಗಳಾದ ಕೆ ವಿ ಶ್ರೀಧರ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರಾದ ಪಿ. ಜಿ. ಪ್ರವೀಣ್, ಮಿತ್ರ ಮಂಡಳಿಯ ಹಲವು ಸದಸ್ಯರು ಮತ್ತು ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.