Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರಿನ ಬಿಜೆಪಿ ಕಚೇರಿಗೆ ಕುಂಬ್ರಳ್ಳಿ ಸುಬ್ಬಣ್ಣ ಭೇಟಿ: ಮುಖಂಡರಿಂದ ಸನ್ಮಾನ

Kumbaralli Subbanna

ಮೈಸೂರು: ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಳಿಕ ಕುಂಬ್ರಳ್ಳಿ ಸುಬ್ಬಣ್ಣ ಅವರಿಂದು ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

ಮೈಸೂರಿನ ಚಾಮರಾಜ ಮೊಹಲ್ಲಾದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕುಂಬ್ರಳ್ಳಿ ಸುಬ್ಬಣ್ಣ ಅವರಿಗೆ ಬಿಜೆಪಿ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಕುಂಬ್ರಳ್ಳಿ ಸುಬ್ಬಣ್ಣ ಅವರು, ಮುಂದಿನ ದಿನಗಳ ಪಕ್ಷವನ್ನು ಉತ್ತಮವಾಗಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಪಣ ತೊಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್, ಸಾಮ್ರಾಟ್ ಸುಂದರೇಶನ್, ಮಂಗಳ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Tags:
error: Content is protected !!