ಮೈಸೂರು: ದುಬೈ ಆನಿವಾಸಿ ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದ ಸಂಯುಕ್ತಾಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಸೆಲೆಬ್ರಿಟಿ ಲೀಗ್ ಕ್ರಿಕೆಟ್ ಟೂರ್ನಿಯನ್ನು ದುಬೈನಲ್ಲಿ ಆಯೋಜನೆ ಮಾಡಲಾಗಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಮಯೂರ್ ಮಾಸ್ಟರ್, ಕನ್ನಡ ಚಿತ್ರರಂಗದ ಎಲ್ಲಾ ವಿಭಾಗಗಳ ಕಲಾವಿದರ ತಂತ್ರಜ್ಞಾರಿಗಾಗಿ ಈ ಟೂರ್ನಿ ಆಯೋಜನೆ ಮಾಡಲಾಗಿದೆ. ಏಪ್ರಿಲ್ 28 ರಿಂದ ಮೇ 3 ರವೆರಗೆ ದುಬೈನ ಶಾರ್ಜಾ ಮೈದಾನದಲ್ಲಿ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಲೀಗ್ ಮಾದರಿಯ ಟೂರ್ನಿಯಾದ್ದರಿಂದ ಚಿತ್ರರಂಗದ ಹಲವಾರು ಕಲಾವಿದರು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾದರು.
ದುಬೈನ ಆನಿವಾಸಿ ಕನ್ನಡಿಗ ಸಿರಾಜ್, ಶ್ರೀನಿಧಿ ಉಪಸ್ಥಿತರಿದ್ದರು.





