ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌ಸಿ ಮಹದೇವಪ್ಪ ಅವರ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಒಟ್ಟು 112 ಸ್ವೀಕಾರವಾಗಿವೆ.
ಅದರಲ್ಲಿ ಕುಡಿಯುವ ನೀರಿನ ಕೊರತೆ, ಕಟ್ಟಡ ಮತ್ತು ವಸತಿ ಸಮಸ್ಯೆ, ಜಮೀನಿನ ಸಮಸ್ಯೆ ಸೇರಿದಂತೆ ಇನ್ನೂ ಮುಂತಾದ ಹಲವು ಸಮಸ್ಯೆಗಳ ಹೊತ್ತು ಸಾರ್ವಜನಿಕರು ಸಚಿವರನ್ನು ಭೇಟಿಯಾದರು.
ಬಳಿಕ ಮಾತನಾಡಿದ ಸಚಿವರು ಅಧಿಕಾರಿಗಳ ಜೊತೆ ಸೇರಿ ಚರ್ಚಿಸಿ ಶೀಘ್ರವಾಗಿ ಪರಿಹರಿಸಲಾಗುವುದು. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಸಾರ್ವಜನಿಕರ ಸಮಸ್ಯೆಗಳಿಗೆ 2-3 ಗಂಟೆಗಳ ಕಾಲ ಸಮಯ ನಿಗದಿ ಮಾಡಿ ಅವರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ತುಳಸಿ ಶಕ್ತಿ ನಗರದ ಮಹಿಳಾ ಸಮಾಜದಲ್ಲಿ ಕಾರ್ಯನಿರ್ವಹಿಸುವ ಬಡ ಮಹಿಳೆಯರಿಗೋಸ್ಕರ, ಅವರ ಆರ್ಥಿಕ ಮತ್ತು ಸಾಮಾಜಿಕ ಹಿತ ದೃಷ್ಠಿಯಿಂದ ಸರ್ಕಾರದ ವತಿಯಿಂದ ರೂ.5 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ವಿಕಲಚೇತನರೊಬ್ಬರ ಕುಟುಂಬದವರೆಲ್ಲರೂ ಅಂಧರಾಗಿದ್ದು ಅವರ ನಿವೇಶನವು ನಾಲ್ಕನೇ ಮಹಡಿಯಲ್ಲಿದ್ದು ಅದನ್ನು ಬದಲಾಯಿಸುವ ಕುರಿತು ಸಲ್ಲಿಸಿದ ಮನವಿಗೆ ಶೀಘ್ರವಾಗಿ ಬದಲಾವಣೆಯನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಮಹಿಳೆಯೊಬ್ಬಳಿಗೆ ಕೈ ಮತ್ತು ಕಾಲು ಇಲ್ಲದ ಕಾರಣ ಆಕೆಯ ಮುಂದಿನ ಜೀವನವನ್ನು ಸಾಗಿಸಲು ಅಂಗಡಿಯ ವ್ಯವಸ್ಥೆಯನ್ನು ಮಾಡಿಕೊಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.