ಮೈಸೂರು: ರಾಜಕೀಯ ಲಾಭಕ್ಕಾಗಿ ಈ ಹಿಂದಿನ ಸರ್ಕಾರ 10 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಈಗ ಈಗಿನ ಸರ್ಕಾರ ಅವೆಲ್ಲವನ್ನೂ ಮುಚ್ಚಲು ಹೊರಟಿರುವುದು ತಪ್ಪು ಎಂದು ನಿವೃತ್ತ ಹಿರಿಯ ಪ್ರಾಧ್ಯಾಪಕರು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಹದೇವ, ಹೊಸ ವಿವಿಗಳನ್ನು ನಿರ್ವಹಣೆ ಮಾಡಲು ಅವಶ್ಯಕವಿರುವುದು 342 ಕೋಟಿ ಮಾತ್ರ. ರಾಜ್ಯ ಸರ್ಕಾರ ಈ ಆರ್ಥಿಕ ಹೊರೆಯ ಬಗ್ಗೆ ಚಿಂತಿಸುವುದರ ಜೊತೆಯಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜ್ಯದ ಪ್ರಗತಿಯ ದೃಷ್ಠಿಕೋನದಿಂದಲೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮನವಿ ಮಾಡಿದರು.
ಜೊತೆಗೆ ರಾಜ್ಯದಲ್ಲಿ ಸುಮಾರು 68 ವಿವಿಗಳಿವೆ. ಇವುಗಳಲ್ಲಿ 27 ಖಾಸಗಿಯವು. ಸರ್ಕಾರಿ ವಿವಿ ಕೇವಲ 42 ಮಾತ್ರ. ಬೆಂಗಳೂರೊಂದರಲ್ಲೇ 17 ಖಾಸಗಿ ವಿವಿ ಇವೆ. ಈ ವಿವಿಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಸಾಮಾಜಿಕ, ಆರ್ಥಿಕ, ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸರ್ಕಾರ ಹೊಸ ವಿವಿ ಮುಚ್ಚುವ ನಿರ್ಧಾರ ಪುನರ್ ಪರಿಶೀಲಿಸಬೇಕೆಂದು ಕೋರಿದರು.
ಎಸ್.ಆರ್. ರಮೇಶ್, ಕೆ.ಪಿ. ವಾಸದೇವನ್ ಮೊದಲಾದವರು ಉಪಸ್ಥಿತರಿದ್ದರು.





