ಮೈಸೂರು: ನಾಡಿನ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಬಟ್ಟೆ ತೆಗೆದು ಅನುಚಿತವಾಗಿ ವರ್ತಿಸುತ್ತಿದ್ದ ಹೊರ ರಾಜ್ಯದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಬರುತ್ತಿದ್ದ ಹೊರ ರಾಜ್ಯದ ಸುಮಾರು ಐದರಿಂದ ಆರು ಮಂದಿ ಯುವಕರು ಬಟ್ಟೆ ತೆಗೆದು ಅನುಚಿತವಾಗಿ ವರ್ತಿಸುತ್ತಿದ್ದರು. ಇದರಿಂದ ಬೆಟ್ಟಕ್ಕೆ ತೆರಳುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಯುವಕರ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರು.
ಇದನ್ನೂ ಓದಿ:- ಪ್ರವಾಸದ ಆಸೆ ತೋರಿಸಿ ಗ್ರಾಹಕರಿಗೆ ಮೋಸ: 5 ಲಕ್ಷಕ್ಕೂ ಅಧಿಕ ವಂಚನೆ
ಸಾರ್ವಜನಿಕರ ದೂರಿನ ಮೇರೆಗೆ ಚಾಮುಂಡಿಬೆಟ್ಟ ಉಪ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಹೊರ ರಾಜ್ಯದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆ ಯುವಕರಿಗೆ ತಿಳುವಳಿಕೆ ಹೇಳಿ ಲಘು ಪ್ರಕರಣ ದಾಖಲಿಸಿದ್ದಾರೆ.





