Mysore
23
clear sky

Social Media

ಗುರುವಾರ, 22 ಜನವರಿ 2026
Light
Dark

ಬಾನು ಮುಷ್ತಾಪ್‌ ಕ್ಷಮೆ ಕೇಳಿದಲ್ಲಿ ಕೇಸ್‌ ವಾಪಸ್‌ ಪಡೆಯುವೆ : ಪ್ರತಾಪ್‌ ಸಿಂಹ

prathap simha

ಮೈಸೂರು : ಸಾಹಿತಿ ಬಾನು ಮುಷ್ತಾಕ್ ಅವರು ಮುಸ್ಲಿಂ ಎನ್ನುವ ಕಾರಣಕ್ಕಾಗಿ ಮೈಸೂರು ದಸರಾ ಉದ್ಘಾಟನೆಗೆ ವಿರೋಧ ಮಾಡುತ್ತಿಲ್ಲ. ಬದಲಾಗಿ ೨೦೨೩ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ತಾಯಿಯ ಬಗ್ಗೆ ಆಡಿರುವ ಮಾತಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳಿದಲ್ಲಿ ನಾನು ಹಾಕಿರುವ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಹೈಕೋರ್ಟ್‌ನಲ್ಲಿ ಕಲಂ ೨೬ರ ಅಡಿ ಕೇಸ್ ಹಾಕಿದ್ದೇನೆ. ಇದರಲ್ಲಿ ಹಿಂದು ಧಾರ್ಮಿಕ ಪೂಜಾವಿಧಿ ವಿಧಾನಗಳ ಕುರಿತು ಹಾಗೂ ಸಂಪ್ರದಾಯಗಳ ವಿರುದ್ಧ ಕಂಡು ಬಂದರೆ ಪ್ರಶ್ನೆ ಮಾಡಬಹುದು ಎಂದು ಕಲಂ ೨೬ರಲ್ಲಿ ತಿಳಿಸಲಾಗಿದೆ. ಅದರಂತೆ ಕೇಸ್ ಹಾಕಿದ್ದೇನೆಯೇ ಹೊರತು ಇದರಲ್ಲಿ ಯಾವ ಬೇರೆ ಕಾರಣಗಳಿಲ್ಲ ಎಂದರು.

೨೦೨೩ರಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಬಾನು ಮುಷ್ತಾಕ್ ಆಡಿರುವ ಮಾತಿಗೆ ಕ್ಷಮೆ ಕೇಳಬೇಕು ಹಾಗೂ ದಸರಾ ಉದ್ಘಾಟನಾ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಸ್ಪಷ್ಟನೆ ಕೊಡಬೇಕು. ಹಾಗಾದರೆ ಮಾತ್ರ ನಾನು ಹಾಕಿರುವ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಅವರು ಹೇಳಿದರು.

ಮುಸ್ಲಿಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಆದರೆ, ಹಿಂದು ಧಾರ್ಮಿಕ ಆಚರಣೆ ಬಗ್ಗೆ ಅವರ ಹಿಂದಿನ ಮಾತುಗಳು ಅವರಿಗಿರುವ ಭಾವನೆ ವ್ಯಕ್ತಪಡಿಸುತ್ತವೆ. ಹೀಗಾಗಿ ಅವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾವು ಜಾತ್ಯತೀತತೆಯ ಪಾಠ ಕಲಿಯಬೇಕಿಲ್ಲ. ಹಿಂದೂ ಧರ್ಮದ ಬಗ್ಗೆ ಈ ನೆಲದ ಕಾನೂನು ಹಾಗೂ ಸಂಸ್ಕೃತಿಯನ್ನು ಒಪ್ಪಿದವರಿಗೆ ನಾವು ಗೌರವ ಕೊಡುತ್ತೇವೆ ಎಂದರು.

ಏನೂ ಕೆಲಸವಿಲ್ಲದವರು ಇದನ್ನು ಮಾಡುತ್ತಾರೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ೨೦೨೩ರಲ್ಲಿ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಮಾಡಿದ ಭಾಷಣ ನೀವು ಒಪ್ಪುತ್ತೀರಾ? ಈ ಬಗ್ಗೆ ತಮ್ಮ ಅಪ್ಪಣೆ ಕೇಳಬೇಕು ಎಂದು ಒತ್ತಾಯಿಸಿದರು.

ಕೇಸ್ ಮ್ಯಾನೇಜ್ ಮಾಡುವುದರಲ್ಲಿ ನೀವು ಬಹಳ ಚಾಣಾಕ್ಷರು, ಮುಡಾ ಕೇಸ್‌ನಲ್ಲೇ ಅದನ್ನು ನಾವು ನೋಡಿದ್ದೇವೆ. ನಮಗೆ ಕೇಸ್ ಬಗ್ಗೆ ಹೇಳಿ ಕೊಡುವುದಕ್ಕೆ ಬರಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮುಸ್ಲಿಮರು ಶಾಂತಿ ಪ್ರಿಯರು ಎಂದು ಸಿಎಂ ಸಿದ್ದರಾಮಯ್ಯನವರು ಮೊನ್ನೆ ಹೇಳಿದ್ದಾರೆ. ಆದರೆ ಮಂಡ್ಯದಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು ಎಸೆದಿದ್ದು ಯಾರು ಸಿದ್ದರಾಮಯ್ಯನವರೇ? ಹಿಂದೂಗಳಷ್ಟು ಜಾತ್ಯತೀತರು ಮತ್ತೊಬ್ಬರು ಇಲ್ಲ. ಸಿಎಂ ಸಿದ್ದರಾಮಯ್ಯನವರೇ ಹಿಂದೂಗಳಿಗೆ ಜಾತ್ಯತೀತತೆ ಪಾಠ ಮಾಡಬೇಡಿ. ಸಿಎಂ ಮುಸ್ಲಿಮರಿಗೆ ಉತ್ತೇಜನ ಕೊಡುತ್ತಿದ್ದಾರೆ. ಮುಸ್ಲಿಮರು ಶಾಂತಿ ಪ್ರಿಯರು ಎಂದ ತಕ್ಷಣ ಮುಸ್ಲಿಮರು ಮಂಡ್ಯದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ಎಸೆದಿದ್ದಾರೆ. ಇದೇನಾ ಶಾಂತಿ ಪ್ರಿಯರು ಮಾಡುವ ಕೆಲಸ ಎಂದು ಕಿಡಿಕಾರಿದರು.

Tags:
error: Content is protected !!