ಮೈಸೂರು: ಮುಡಾ ಪ್ರಕರಣದ ತನಿಖೆ ಲೋಕಾಯುಕ್ತದಲ್ಲಿದ್ದ, ಅದರಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಇ.ಡಿ.ಗೂ ದೂರು ನೀಡಲಾಗಿದೆ. ಯಾರು ಬೇಕಾದರೂ ದೂರು ನೀಡಬಹುದು. ಆದರೆ ಕಾನೂನು ಏನನ್ನು ಹೇಳುತ್ತದೆ ಹಾಗೆ ನಾವು ನಡೆದುಕೊಳ್ಳಬೇಕು ಅಷ್ಟೇ. ನನ್ನ ವಿಚಾರದಲ್ಲಿ ಕಾನೂನು ರೀತಿಯ ಕ್ರಮ ಆಗುತ್ತದೆ ಎಂದರು.
ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಪ್ಪೆಸಗಿದ್ದಾರೆ. ಅಧಿಕಾರಿಗಳ ವಿರುದ್ಧ ಟೀಕೆ ಮಾಡೋದು ಸರಿಯಲ್ಲ. ಇಂತಹ ಹೇಳಿಕೆಗಳ ಮೇಲೆ ನಾನು ಹೆಚ್ಚಿಗೆ ಏನನ್ನೂ ಮಾತನಾಡಲ್ಲ ಎಂದರು.