Mysore
19
mist

Social Media

ಬುಧವಾರ, 18 ಡಿಸೆಂಬರ್ 2024
Light
Dark

ತನ್ನ ಅವಧಿಯಲ್ಲಿ ಪಾರ್ವತಿ ಸಿದ್ದರಾಮಯ್ಯಗೆ ನಿವೇಶನಗಳನ್ನು ನೀಡಿಲ್ಲ: ಮುಡಾ ಮಾಜಿ ಅಧ್ಯಕ್ಷ ಧ್ರುವ ಕುಮಾರ್‌

ಮೈಸೂರು: ಮುಡಾದಲ್ಲಿ ತಾನು ಅಧ್ಯಕ್ಷನಾಗಿದ್ದಾಗ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಯಾವುದೇ ನಿವೇಶನಗಳನ್ನು ನೀಡಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಇಂದು(ನ.19) ಮೈಸೂರು ಲೋಕಾಯುಕ್ತ ಅಧಿಕಾರಗಳ ಕಚೇರಿಯ ಮುಂದೆ ವಿಚಾರಣೆ ಮುಗಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಮುಡಾ ಸಭೆಯಲ್ಲಿ 50:50 ಅನುಪಾತದ ಬದಲಿ ನಿವೇಶನಗಳನ್ನು ನೀಡುವುದಾಗಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ನಂತರ ನಿಮ್ಮ ಪತ್ನಿ ಪಾರ್ವತಿ ಅವರ 3.14 ಎಕರೆ ಜಮೀನು ಅನ್ನು ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ. ಆ ಕಾರಣಕ್ಕಾಗಿ ಅವರಿಗೆ ಬದಲಿ ನಿವೇಶನಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿ ಅಂದಿನ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಬಳಿ ಕೇಳಿದಾಗ ಅವರು ನಾನು ರಾಜ್ಯದಲ್ಲಿ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಯಾವುದೇ ಕಾರಣಕ್ಕೂ ಮುಡಾ ವ್ಯವಹಾರದಲ್ಲಿ ಭಾಗಿಯಾಗುವುದಿಲ್ಲ. ನಮಗೆ ಮುಡಾದಿಂದ ಯಾವುದೇ ನಿವೇಶನಗಳು ಸಹ ಬೇಡವೆಂದು ತಿಳಿಸಿದ್ದರು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನನ್ನ ಅವಧಿಗೂ ಮುಂಚೆಯಿಂದಲೇ 50:50 ಅನುಪಾತದ ಬದಲಿ ನಿವೇಶನಗಳು ಜಾರಿಯಲ್ಲಿದ್ದವು. ಆದರೆ ನಾನು ಅಧಿಕಾರ ನಿರ್ವಹಿಸುವಾಗ ಯಾವುದೇ 50:50 ಅನುಪಾತವಾಗಲಿ ಅಥವಾ 10 *10 ಆಗಲಿ ಯಾವುದೇ ನಿವೇಶನಗಳನ್ನು ಯಾರಿಗೂ ಮಂಜೂರು ಮಾಡಿಲ್ಲ. ನನ್ನ ಅವಧಿ ಮುಗಿದ ಮೇಲೆ ಮುಡಾದಲ್ಲಿ ಏನೆಲ್ಲಾ ಆಗಿದೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

Tags: