Mysore
17
overcast clouds

Social Media

ಗುರುವಾರ, 08 ಜನವರಿ 2026
Light
Dark

ನಾನು ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ: ಸಿಎಂ ಸಿದ್ದರಾಮಯ್ಯ

ಮೈಸೂರು: ನಾನು ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ. ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹೈಕಮಾಂಡ್ ಮೇಲೆ ಪರಿಪೂರ್ಣ ವಿಶ್ವಾಸ ಇದೆ. ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ನನಗೆ ದೇವರಾಜ ಅರಸು ದಾಖಲೆಯ ಬಗ್ಗೆ ಅರಿವು ಇರಲಿಲ್ಲ. ಯಾವ ದಾಖಲೆ ಮುರಿಯಬೇಕು ಎಂಬುದು ನನ್ನ ಗಮನದಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ. ದೇವರಾಜ ಅರಸು ರಾಜಕಾರಣದ ಸಮಯವೇ ಬೇರೆ.
ಇವತ್ತಿನ ಸಮಯವೇ ಬೇರೆ. ಜನರ ಆಶೀರ್ವಾದದಿಂದ ಅಷ್ಟೇ ನಾನು ಇಲ್ಲಿಯ ತನಕ ಬಂದಿದ್ದೇನೆ. ಇಲ್ಲಿವರೆಗಿನ ರಾಜಕೀಯ ನನಗೆ ತೃಪ್ತಿ ಕೊಟ್ಟಿದೆ. ಜನರಿಗೆ ಇನ್ನಷ್ಟು ಕೆಲಸ ಮಾಡಬೇಕಿದೆ. ನಾನು ಒಂದು ಬಾರಿ ಎಂಎಲ್ಎ ಆದರೆ ಸಾಕು ಅಂದುಕೊಂಡಿದೆ. ಆದರೆ ಎಂಎಲ್ಎ ಡಿಸಿಎಂ ಸಿಎಂ ಎಲ್ಲ ಆಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ರಾಜ್ಯದ ಹಲವಡೆ ಸಿಎಂ ಹೆಸರಿನಲ್ಲಿ ನಾಟಿ ಕೋಳಿ ಪಲಾವ್ ಹಂಚಿಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರು ನಾಟಿ ಕೋಳಿ ಪಲಾವ್ ಹಂಚುತ್ತಿದ್ದಾರೆ ನನಗೆ ಗೊತ್ತಿಲ್ಲ. ನಾನು ಹಳ್ಳಿಯಿಂದ ಬಂದವನು. ಸಹಜವಾಗಿ ನನಗೆ ನಾಟಿ ಕೋಳಿ ಇಷ್ಟ. ನನ್ನಂತಯೇ ಹಳ್ಳಿಯಿಂದ ಬಂದವರಿಗೆ ನಾಟಿ ಕೋಳಿ ಊಟ ಇಷ್ಟ ಇರುತ್ತದೆ. ನಾನು ಮೊದಲು ಹೆಚ್ಚು ನಾಟಿ ಕೋಳಿ ತಿನ್ನುತ್ತಿದ್ದೆ. ಈಗ ಕಡಿಮೆ ಮಾಡಿದ್ದೇನೆ. ಇಂದು ಯಾರ್ಯಾರು ಹಂಚಿದ್ದಾರೆ ನನ್ನ ಗಮನದಲ್ಲೂ ಇಲ್ಲ ಬಿಡಿ ಎಂದು ಹೇಳಿದರು.

ಇನ್ನು ನಿನ್ನೆ ವೇಣುಗೋಪಾಲ್ ಭೇಟಿ ವಿಚಾರ‌ಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಿ ದೆಹಲಿಗೆ ಹೋಗುತ್ತಿದ್ದರು. ಹೀಗಾಗಿ ಅವರನ್ನ ಭೇಟಿಯಾಗಿದ್ದೇನೆ ಅಷ್ಟೇ. ಯಾವ ರಾಜಕಾರಣವೂ ಚರ್ಚೆ ಆಗಿಲ್ಲ. ಸಂಪುಟ ಪುನಾರಚನೆ ಬಗ್ಗೆಯೂ ಅವರ ಬಳಿ ಚರ್ಚೆ ಮಾಡಿಲ್ಲ. ಸಂಪುಟ ಪುನರ್‌ ರಚನೆ ವಿಚಾರದಲ್ಲಿ ಹೈಕಮಾಂಡ್ ಯಾವತ್ತು ದೆಹಲಿಗೆ ಕರೆಯುತ್ತದೆ ಅವತ್ತು ದೆಹಲಿಗೆ ಹೋಗುತ್ತೇನೆ. ಬಜೆಟ್‌ನಲ್ಲಿ ಏನೇನು ವಿಶೇಷತೆ ಇರುತ್ತದೆ ಅಂದೇ ನೋಡಿ ಎಂದು ಹೇಳಿದರು.

Tags:
error: Content is protected !!