ಮೈಸೂರು: ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ಹೊಸತೊಡಕಿನ ಸಂಭ್ರಮ ಮನೆಮಾಡಿದ್ದು, ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಯುಗಾದಿ ಹಾಗೂ ರಂಜಾನ್ ಸರಣಿ ರಜೆಯ ಹಿನ್ನೆಲೆಯಲ್ಲಿ ಮೈಸೂರು ನಗರದ ಕೆ.ಜಿ.ಕೊಪ್ಪಲ್, ಒಂಟಿಕೊಪ್ಪಲ್, ಕೆ.ಆರ್.ಮೊಹಲ್ಲಾದ ಅಂಗಡಿಗಳಲ್ಲಿ ಗುಡ್ಡೆ ಮಾಂಸ ಮಾರಾಟ ಜೋರಾಗಿದೆ.
ಒಂದು ಗುಡ್ಡೆ ಮಾಂಸ 600ರೂಗೆ ಮಾರಾಟವಾಗುತ್ತಿದ್ದು, ಕುರಿ, ಮೇಕೆ, ಕೋಳಿ ಮಾಂಸದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಹೊಸತೊಡಕು ಹಿನ್ನೆಲೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೇ ಮಟನ್ ಸ್ಟಾಲ್‌ಗಳು ಓಪನ್ ಆಗಿದ್ದು, ಮಾಂಸಪ್ರಿಯರು ನಸುಕಿನ ಜಾವದಲ್ಲೇ ಎದ್ದು ಮಟನ್ ಖರೀದಿಗೆ ಮುಗಿಬಿದ್ದಿದ್ದಾರೆ.





