Mysore
23
broken clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಹೂಫ್‌ಬೀಟ್ ಮ್ಯಾರಥಾನ್ : ಮೈಸೂರು ವಿದ್ಯಾರ್ಥಿಗಳ ಸಾಧನೆ

ಮೈಸೂರು : ಮಹಾರಾಷ್ಟ್ರದ ಕಾರ್ಜತ್‌ನಲ್ಲಿ ಇತ್ತೀಚೆಗೆ ನಡೆದ ಹೂಫ್‌ಬೀಟ್ ಮ್ಯಾರಥಾನ್ – ಮಹಾರಾಷ್ಟ್ರ ರಾಜ್ಯ ಎಂಡ್ಯುರನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೈಸೂರಿನ ಚಾಮುಂಡಿ ಹಾರ್ಸಸ್ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳ ನಡುವೆ ಮೈಸೂರಿನ ಯುವ ರೈಡರ್‌ಗಳು ತಮ್ಮ ಸಾಮರ್ಥ್ಯ, ಸಹನಶಕ್ತಿ ಹಾಗೂ ಕುದುರೆಯೊಂದಿಗೆ ಹೊಂದಾಣಿಕೆಯ ಕೌಶಲವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಈ ಚಾಂಪಿಯನ್‌ಶಿಪ್‌ನಲ್ಲಿ 20 ಕಿ.ಮೀ. ಮತ್ತು 40 ಕಿ.ಮೀ ಎಂಡ್ಯುರನ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕುದುರೆಯ ಆರೋಗ್ಯ ಪರೀಕ್ಷೆ, ವೇಗ ನಿಯಂತ್ರಣ, ಸಮಯ ನಿರ್ವಹಣೆ ಹಾಗೂ ರೈಡರ್‌ಗಳ ದೈಹಿಕ-ಮಾನಸಿಕ ಸಮತೋಲನವನ್ನು ಪರಿಶೀಲಿಸುವ ಕಠಿಣ ಸ್ಪರ್ಧೆಯಾಗಿದ್ದರೂ, ಚಾಮುಂಡಿ ಹಾರ್ಸಸ್ ಸಂಸ್ಥೆಯ ಶಿಸ್ತಿನ ತರಬೇತಿಯನ್ನು ಅವರು ಸದುಪಯೋಗಪಡಿಸಿಕೊಂಡರು.

ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಸೇಂಟ್ ಸೆಂಟ್ರಲ್ ಜೋಸೆಫ್ ಶಾಲೆಗಳ ವಿದ್ಯಾರ್ಥಿಗಳಾದ ಕ್ರಮವಾಗಿ ಎಲ್.ಕ್ಷಮಿನಾಮ್ ಅರಸ್, ಎಸ್.ಕೆ.ಲೌಕ್ಯ ಮತ್ತು ಎಸ್.ಕೆ.ಅದ್ವಿಕಾ ಈ ಸಾಧನೆ ಮಾಡಿದವರು.

ಚಾಮುಂಡಿ ಹಾರ್ಸಸ್ ಸಂಸ್ಥೆಯ ವ್ಯವಸ್ಥಿತ ತರಬೇತಿ, ಪಾಲಕರ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ನಿರಂತರ ಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಮೈಸೂರಿನ ಈ ಯುವ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

 

Tags:
error: Content is protected !!