ಮೈಸೂರು: ನಾವು ನೋಡುವ ದೃಷ್ಟಿ ಸರಿಯಾಗಿದ್ದರೆ ಯಾಕೆ ನಮ್ಮನ್ನು ಟ್ರ್ಯಾಪ್ ಮಾಡುತ್ತಾರೆ ಎಂದು ಹುಣಸೂರು ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಕಾಂಗ್ರೆಸ್ ಕೆಲ ಸಚಿವರ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರೀ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇರಬೇಕು. ನಾವು ಸರಿಯಾಗಿದ್ದರೆ ಯಾರು ಯಾಕೆ ನಮ್ಮನು ಟ್ರ್ಯಾಪ್ ಮಾಡುತ್ತಾರೆ. ನಮ್ಮ ದೃಷ್ಟಿ ಸರಿ ಇದ್ದಾಗ ಯಾವ ತಪ್ಪು ನಡೆಯಲ್ಲ. ಸಾವಿರ ಜನ ಬಂದು ನಮ್ಮನ್ನು ಮಾತಾಡಿಸಲಿ ನಮ್ಮ ನೋಟ ಸರಿ ಇದ್ದರೆ ಏನೂ ಆಗಲ್ಲ ಎಂದು ಕಾಂಗ್ರೆಸ್ ಕೆಲ ಸಚಿವರ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಇನ್ನು ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಚರ್ಚೆ ಅಗಬಾರದಿತ್ತು. ಯಾರಿಗೆ ಸಮಸ್ಯೆ ಆಗಿದೆಯೋ ಅವರು ಹೋಗಿ ದೂರು ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಸದನದಲ್ಲಿ ಹನಿಟ್ರ್ಯಾಪ್ ಚರ್ಚೆ ಮಾಡಿ ಯುವ ಶಾಸಕರಿಗೆ ಯಾವ ಸಂದೇಶ ಕೊಟ್ಟರು? ಇದರ ಅಗತ್ಯ ಏನಿತ್ತು? ಎಂದು ಬೇಸರ ವ್ಯಕ್ತಪಡಿಸಿದರು.





