ಮೈಸೂರು: ಇಲ್ಲಿನ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.
ಅನಾಮಿಕ ವ್ಯಕ್ತಿಯೋರ್ವ ಆಂಧ್ರ ಪ್ರದೇಶದಿಂದ ಕರೆ ಮಾಡಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಇಡುವಂತೆ ತಿಳಿಸಿದ್ದಾರೆ ಎಂದು ಕರೆ ಮಾಡಿದ್ದಾನೆ.
ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಅಲರ್ಟ್ ಆದ ರೈಲ್ವೆ ನಿಲ್ದಾಣದ ಪೊಲೀಸರು, ರೈಲ್ವೆ ಫ್ಲಾಟ್‌ಫಾರಂ ಹಾಗೂ ಎಲ್ಲಾ ರೈಲುಗಳನ್ನು ಪರಿಶೀಲನೆ ನಡೆಸಿದ್ದಾರೆ.
ಆಗತಾನೇ ಬಂದು ನಿಂತಿದ್ದ ವಂದೇ ಭಾರತ್ ರೈಲಿನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.





