Mysore
33
scattered clouds

Social Media

ಗುರುವಾರ, 02 ಏಪ್ರಿಲ 2026
Light
Dark

ಮೈಸೂರಿನಲ್ಲಿ ಹೆಚ್ಚಿದ ಟ್ರಾಫಿಕ್‌ ಜಾಮ್:‌ ವಾಹನ ಸವಾರರ ಪರದಾಟ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯುವ ಸಂಭ್ರಮ ನೋಡಲು ಹೋಗುವ ಸ್ಥಳದಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚಾಗಿದ್ದು, ವಾಹನ ಸವಾರರು ಕೆಲಕಾಲ ಪರದಾಟ ನಡೆಸಿದ್ದಾರೆ.

ಕುಕ್ಕರಹಳ್ಳಿ ಕೆರೆ ಸರ್ಕಲ್‌ನಿಂದ ಮಾನಸಂಗೋತ್ರಿ ಕಾಲೇಜು ಪ್ರವೇಶ ದ್ವಾರದ ತನಕವೂ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಯುವ ಸಂಭ್ರಮ ನೋಡಲು ಸಾವಿರಾರು ಜನ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಸಂಭ್ರಮದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೆಲ ಸಮಯದ ಬಳಿಕ ಈ ಟ್ರಾಫಿಕ್‌ ಜಾಮ್‌ ಸಮಸ್ಯೆ ಸರಿಯಾಗಿ, ವಾಹನ ಸವಾರರು ಮುಂದಕ್ಕೆ ಹೋಗಲು ಅನುಕೂಲವಾಯಿತು.

 

Tags:
error: Content is protected !!