ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ಇಂದು ಅಮಾವಾಸ್ಯೆಯಾದ ಹಿನ್ನೆಲೆಯಲ್ಲಿ ತಾಲೀಮನ್ನು ರದ್ದುಗೊಳಿಸಲಾಗಿದೆ.
ಅರಮನೆ ಅಂಗಳದಲ್ಲೇ ದಸರಾ ಗಜಪಡೆ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಹಿಂದಿನಿಂದಲೂ ಅಮಾವಾಸ್ಯೆಯಂದು ಗಜಪಡೆ ತಾಲೀಮು ರದ್ದುಗೊಳಿಸುತ್ತಾ ಬರಲಾಗುತ್ತಿದೆ. ಅಮಾವಾಸ್ಯೆಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆನೆ ತಾಲೀಮು ಕೂಡ ಒಂದು ರೀತಿಯ ಶುಭ ಕಾರ್ಯವೇ ಆಗಿರುವುದರಿಂದ ಇಂದು ತಾಲೀಮನ್ನು ರದ್ದು ಮಾಡಲಾಗಿದೆ ಎಂದು ಗಜಪಡೆ ಅರ್ಚಕ ಪ್ರಹ್ಲಾದ್ ರಾವ್ ಮಾಹಿತಿ ನೀಡಿದ್ದಾರೆ.





