Mysore
21
few clouds

Social Media

ಶನಿವಾರ, 28 ಡಿಸೆಂಬರ್ 2024
Light
Dark

ಮನಮೋಹನ ಸಿಂಗ್‌ ಆಡಳಿತ ವಿಶ್ವಕ್ಕೆ ಮಾದರಿ: ಜಿ.ಟಿ.ದೇವೇಗೌಡ

ಮೈಸೂರು: ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಗುರುವಾರ ತಡರಾತ್ರಿ ನಿಧನರಾಗಿದ್ದು, ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.

ಮನಮೋಹನ್‌ ಸಿಂಗ್‌ ನಿಧನರಾದ ಸುದ್ದಿ ಕೇಳಿ ಪ್ರತಿಕ್ರಿಯೆ ನೀಡಿರುವ ಅವರು, ಮಾಜಿ ಪ್ರಧಾನಿ ಹಾಗೂ ಭಾರತ ದೇಶ ಕಂಡ ಪ್ರಮುಖ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ನಿಧನದ ಸುದ್ದಿಯೂ ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.
ಡಾ. ಮನಮೋಹನ್ ಸಿಂಗ್ ರವರು ಅಂತರಾಷ್ಟ್ರೀಯ ಮೇಲ್ವಿಚಾರಣಾ ನಿಧಿ ಸಲಹೆಗಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಭಾರತ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದು, ಭಾರತದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಭೂತರಾಗಿದ್ದರು ಎಂದು ಹೇಳಿದ್ದಾರೆ.

ಡಾ.ಮನಮೋಹನ್ ಸಿಂಗ್ ಅವರು ಮೌನ ಕ್ರಾಂತಿಯ ಮೂಲಕ ಆರ್ಥಿಕ ತಜ್ಞರಾಗಿ ಆಡಳಿತ ನಡೆಸಿರುವುದು ವಿಶ್ವಕ್ಕೆ ಮಾದರಿಯಾಗಿದೆ. ಅವರ ಬದುಕು, ಸೇವೆ ಮತ್ತು ಆಡಳಿತ ಇವುಗಳು ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳಿಗೆ ಮಾದರಿಯಾಗಿದೆ. ಇಂದಿನ ಸರ್ಕಾರಗಳು ಅವರ ಮಾರ್ಗದರ್ಶನವನ್ನು, ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ಮುಂದುವರೆಸುವ ಮೂಲಕ ಅವರ ಹೆಸರು ಅಜರಾಮರವಾಗಿ, ಶಾಶ್ವತವಾಗಿ ಉಳಿಯುವಂತಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Tags: