Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮತ್ತೆ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ರೆ, ನಾನು ಕಾಂಗ್ರೆಸ್‌ ಸೇರುತ್ತೇನೆ ಎಂದರ್ಥವಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು, ನಾನು ಒಮ್ಮೆ ಕಾರ್ಪೊರೇಷನ್‌ನಲ್ಲಿ ಕೇಳಿದಾಗ ಆ ರಸ್ತೆಗೆ ಹೆಸರಿಲ್ಲ ಅಂದ್ರು. ಹಾಗಾಗಿ ಸಿದ್ದರಾಮಯ್ಯ ಹೆಸರಿಡಲಿ ಬಿಡಿ ಎಂದು ನಾನು ಕೂಡ ಹೇಳಿದ್ದೆ. ಕರ್ನಾಟಕ ರಾಜ್ಯಕ್ಕೆ ಸಿದ್ದರಾಮಯ್ಯ ಕೊಡುಗೆ ಸಾಕಷ್ಟಿದೆ. ಅದನ್ನು ಯಾರೂ ಪ್ರಿನ್ಸೆಸ್ ರಸ್ತೆ ಅಂತ ಕರಿಯಲ್ಲ. ಆದ್ದರಿಂದ ನಾನು ಕೂಡ ಸಿದ್ದರಾಮಯ್ಯರ ಹೆಸರಿಡಿ ಎಂದು ಹೇಳಿದ್ದೆ. ಸಿದ್ದರಾಮಯ್ಯ ಪರ ಮಾತನಾಡಿದ್ರೆ, ನಾನು ಕಾಂಗ್ರೆಸ್‌ ಸೇರುತ್ತೇನೆ ಎಂದರ್ಥವಲ್ಲ ಎಂದು ಕಾಂಗ್ರೆಸ್‌ ಸೇರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಕಳೆದ 11 ವರ್ಷದಿಂದ ಸಿದ್ದರಾಮಯ್ಯರನ್ನು ವಿರೋಧಿಸುತ್ತಿರುವವನು ಪ್ರತಾಪ್ ಸಿಂಹ ಒಬ್ಬನೇ. ಅವರ ಸಿದ್ದಾಂತ ವಿರೋಧಿ ನಾನು. ಇದೇ ಸಿದ್ದರಾಮಯ್ಯ ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಹೆಸರನ್ನು ಇಡಲು ಹೊರಟಿದ್ದರು. ಅದನ್ನು ಬೊಮ್ಮಾಯಿ ಅವರಿಗೆ ಹೇಳಿ ತಡೆದಿದ್ದು ನಾನು. ಇದಕ್ಕೆ ಮೈಸೂರು ಮಹಾರಾಣಿ ಅವರು ಕೂಡ ನನ್ನನ್ನು ಹೊಗಳಿದ್ರು. ಮೈಸೂರು ಬೆಂಗಳೂರು ನಡುವೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ಇತ್ತು. ಅದನ್ನು ಕೂಡ ಒಡೆಯರ್ ಎಕ್ಸ್‌ಪ್ರೆಸ್ಎಂದು ಬದಲಾಯಿಸಿದೆ. ಅಂದು ಕೂಡ ಪ್ರಮೋದಾದೇವಿ ನನ್ನ ಕಾರ್ಯಕ್ಕೆ ಶ್ಲಾಘಿಸಿದ್ದರು ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

 

 

Tags:
error: Content is protected !!