Mysore
31
few clouds

Social Media

ಬುಧವಾರ, 08 ಏಪ್ರಿಲ 2026
Light
Dark

RSS ವಿಷ ಸರ್ಪ ಎಂಬ ಖರ್ಗೆ ಹೇಳಿಕೆ ವಿಚಾರ: ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ

ಮೈಸೂರು: RSS ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು, ಖರ್ಗೆಗೆ ಹುಚ್ಚು ಹಿಡಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ RSS ಬಗ್ಗೆ ಮಾತನಾಡುವುದಿಲ್ಲ ಅಂದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ರಾಷ್ಟೀಯ ಪಕ್ಷದ ಅಧ್ಯಕ್ಷರಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದೀರಾ. RSS ಕೊಲ್ಲಿ ಎಂದು ದೇಶದಲ್ಲಿರುವ 20% ಮುಸಲ್ಮಾನರಿಗೆ ಪ್ರಚೋದನೆ ಮಾಡ್ತಿದ್ದಿರಲ್ಲ ಏನೂ ಅರ್ಥ ಇದು. ದೇಶದಲ್ಲಿ ನೀವು ಕೋಮು ಗಲಭೆ ಸೃಷ್ಟಿ ಮಾಡುತ್ತಿದ್ದೀರಾ. RSS ಬಿಜೆಪಿಯನ್ನ ವಿಷಸರ್ಪಕ್ಕೆ ಹೋಲಿಸಿದ್ರೆ ಅದನ್ನ ಅಧಿಕಾರಕ್ಕೆ ತಂದಿದ್ದು ಹಿಂದೂಗಳೇ. ನೀವು ಹಿಂದೂಗಳನ್ನ ವಿಷ ಸರ್ಪ ಅಂತ ಹೇಳಿದ್ದೀರಾ. ನೀವು ಮುಸ್ಲಿಂ ಲೀಗ್ ನ ಅಧ್ಯಕ್ಷ ತರ ಮಾತನಾಡುತ್ತಿದ್ದೀರಾ. ನಿಮ್ಮ ಬಾಯಲ್ಲಿ ಇಂಥಹ ಮಾತುಗಳು ಬರಬಾರದು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವ್ರು ಮಾತ್ರ ಮುಸ್ಲಿಂ ಓಲೈಕೆ ಮಾಡಿಕೊಳ್ಳಲು ಮಾತನಾಡುತ್ತಾರೆ ಅನ್ಕೊಂಡಿದ್ದೆ. ಆದ್ರೆ ನೀವು ಎಗ್ಗಿಲ್ಲದೆ ಮಾತನಾಡುತ್ತಿದ್ದೀರಾ. ನಿಮಗೆ ಹೋಲಿಸಿದ್ದಾರೆ ಸಿದ್ದರಾಮಯ್ಯ ಪರವಾಗಿಲ್ಲ. ಆದ್ರೆ ನೀವು ಕೊಲ್ಲಿ ಎಂದು ಹೇಳಿಕೆ ಕೊಟ್ಟಿದ್ದೀರಾ ಕಾಂಗ್ರೆಸ್ ಮುಸ್ಲಿಂ ಲೀಗ್ ಆಗಿ ಹೋಗ್ತಿದೆ. ಮಗ ಮುಖ್ಯಮಂತ್ರಿ ಆಗಲಿ ಎಂದು ಈಗೆಲ್ಲ ಮಾತನಾಡುತ್ತಿದ್ದೀರ. ನಿಮ್ಮ ಮೇಲೆ ನಿಮಗೆ ನಾಚಿಕೆ ಆಗಬೇಕು. ದೇಶದ ಭದ್ರತೆ ಮರೆತು ಮುಸಲ್ಮಾನರನ್ನ ಪ್ರಚೋದಿಸುತ್ತಿದ್ದೀರಾ. ನೀವು 21ನೇ ಶತಮಾನದ ಮೊಹಮದ್ ಅಲಿ ಜಿನ್ನಾ ಅಂದ್ರೆ ತಪ್ಪಾಗಲಾರದು. ಇನ್ನೊಂದು ಜಿನ್ನಾನ ಪ್ರತಿರೂಪದಂತೆ ಮಾತನಾಡುತ್ತಿದ್ದೀರಾ. ಖರ್ಗೆ ಅವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನದಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ ಅಂತ ಇದೆ. ಆದ್ರೆ ಇವ್ರು ಕೊಲ್ಲಿ ಎಂದು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

 

Tags:
error: Content is protected !!