Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಆಗಸ್ಟ್.‌21ರಂದು ದಸರಾ ಗಜಪಯಣ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, 2 ತಿಂಗಳ ಮುಂಚಿತವಾಗಿ ಗಜಪಡೆ ಮೈಸೂರಿಗೆ ಆಗಮಿಸಲಿವೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜಪಯಣ ಆಗಸ್ಟ್‌.21ರದು ನಡೆಯಲಿದ್ದು, ಅರಣ್ಯ ಇಲಾಖೆ ಸರ್ವ ರೀತಿಯಲ್ಲೂ ಸಿದ್ಧತೆ ನಡೆಸಿದೆ.

ಸದ್ಯ ಮೈಸೂರು ದಸರಾಗಾಗಿ 18 ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿದ್ದು, ೨ ತಿಂಗಳ ಮುಂಚಿತವಾಗಿ ಆನೆಗಳು ಮೈಸೂರಿಗೆ ಆಗಮಿಸಲಿವೆ.

ಇನ್ನು ಆಗಸ್ಟ್.‌21ರಂದು ಗಜಪಯಣ ನಿಗದಿಯಾಗಿರುವ ಹಿನ್ನೆಲೆಯಲ್ಲಿ ನಾಲ್ಕು ಹೆಚ್ಚುವರಿ ಆನೆಗಳನ್ನು ಸಹ ಅರಣ್ಯ ಇಲಾಖೆ ಗುರುತಿಸಿದೆ.

ಈ ಬಾರಿಯೂ ಕ್ಯಾಪ್ಟನ್‌ ಅಭಿಮನ್ಯು ಅಂಬಾರಿ ಹೊತ್ತು ಸಾಗಲಿದ್ದಾನೆ. 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಬಳಿಕ ಎರಡನೇ ಹಂತದಲ್ಲಿ ಐದು ಆನೆಗಳನ್ನು ಕರೆತರಲು ತಯಾರಿ ನಡೆಸಲಾಗಿದೆ.

ಇನ್ನು ಮೊದಲ ಹಂತದಲ್ಲಿ ಕ್ಯಾಪ್ಟನ್‌ ಅಭಿಮನ್ಯು, ಭೀಮ, ವರಲಕ್ಷ್ಮೀ, ಏಕಲವ್ಯ, ಧನಂಜಯ, ರೋಹಿತ, ಗೋಪಿ, ಹಾಗೂ ಕಂಜನ್‌ ಆನೆಗಳು ಆಗಮಿಸಲಿದ್ದು, ಎರಡನೇ ಹಂತದಲ್ಲಿ ಸುಗ್ರೀವ, ಪ್ರಶಾಂತ, ಲಕ್ಷ್ಮೀ, ಮಹೇಂದ್ರ ಹಾಗೂ ಹಿರಣ್ಯ ಆನೆಗಳು ಆಗಮಿಸಲಿವೆ.

ಒಟ್ಟು 14 ಆನೆಗಳನ್ನು ವಿವಿಧ ಶಿಬಿರಗಳಿಂದ ಕರೆತರಲಾಗುತ್ತಿದ್ದು, ಮೊದಲ ತಂಡದ ಆನೆಗಳಿಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಆಗಸ್ಟ್.‌21ರಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ.

 

Tags: