ಮೈಸೂರು: ಕಿಡಿಗೇಡಿಗಳು ಬೆಂಕಿ ಹಚ್ಚಿದ ಕೃತ್ಯಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಕೆಲವು ಪ್ರದೇಶ ಹೊತ್ತಿಉರಿದಿದ್ದು,ಕೆಲಕಾಲ ಆತಂಕ ನಿರ್ಮಾಣವಾಗಿತ್ತು.
ಚಾಮುಂಡಿಬೆಟ್ಟದ ತಪ್ಪಲಿನ ರಿಂಗ್ ರಸ್ತೆಯ ನಿರ್ಮಲ ಅಸ್ಪತ್ರೆಯ ಭಾಗದಿಂದ ಲಲಿತಾದ್ರಿಪುರಕ್ಕೆ ಹೋಗುವ ಮಾರ್ಗದಲ್ಲಿ ಸೋಮವಾರ ಸಂಜೆ ಏಳು ಗಂಟೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಕಡ್ಡಿ ಕೀರಿದ್ದಾರೆ. ಸಣ್ಣದಾಗಿ ಉರಿಯತೊಡಗಿದ ಬೆಂಕಿ ಸ್ವಲ್ಪ ಕಳೆಯುತ್ತಿದ್ದಂತೆ ಜೋರಾಗಿ ವ್ಯಾಪಿಸಿದ್ದರಿಂದ ಮುನ್ನೂರು ಮೀಟರ್ ತನಕ ಹೊತ್ತಿದೆ. ತಕ್ಷಣವೇ ಸಾರ್ವಜನಿಕರು ಹಾಗೂ ದೂರದ ಮನೆಯವರು ನೋಡಿ ಅಗ್ನಿಶಾಮಕ ಠಾಣೆಗೆ ವಿಷಯಮುಟ್ಟಿಸಿದ್ದಾರೆ.
ತಕ್ಷಣವೇ ಧಾವಿಸಿದ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಈ ಮಾರ್ಗದಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ವಿದ್ಯಾರ್ಥಿನಿಯೊಬ್ವರ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದ ಜಾಗಕ್ಕೆ ಹೊಂದಿಕೊಂಡ ರಸ್ತೆಯಾಗಿತ್ತು. ಈಗ ಬೆಂಕಿ ನಂದಿಸಿದ್ದು,ಯಾವುದೇ ಹಾನಿಯಾಗಿಲ್ಲ. ಬೆಂಕಿ ಹರಡಿದ್ದರ ಬಗ್ಗೆ ಸಾರ್ವಜನಿಕರೊಬ್ಬರು ವೀಡಿಯೋ ಮಾಡಿ ಆತಂಕ ವ್ಯಕ್ತಪಡಿಸಿದ್ದರು.




