Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮೈಸೂರಿನ ಖ್ಯಾತ ಇತಿಹಾಸಕಾರ ಹಾಗೂ ಪತ್ರಕರ್ತ ಈಚನೂರು ಕುಮಾರ್‌ ವಿಧಿವಶ

ಮೈಸೂರು: ತೀವ್ರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಖ್ಯಾತ ಇತಿಹಾಸಕಾರ ಹಾಗೂ ಹಿರಿಯ ಪತ್ರಕರ್ತ ಈಚನೂರು ಕುಮಾರ್‌ ಅವರು ಇಂದು ನಿಧನರಾಗಿದ್ದಾರೆ.

ಈಚನೂರು ಕುಮಾರ್‌ ಅವರು, ಇಬ್ಬರು ಮಕ್ಕಳಾದ ಅಕ್ಷರಾ ಹಾಗೂ ಪತ್ರಕರ್ತ ಅಜಿತ್‌ರನ್ನು ಅಗಲಿದ್ದಾರೆ.

ಮೈಸೂರು ರಾಜ್ಯದ ಕಥೆಗಳು, ಅರಮನೆ, ರಾಜವಂಶಸ್ಥರ ಬಗ್ಗೆ ಸೊಗಸಾಗಿ ವಿವರಿಸುತ್ತಿದ್ದ ಅವರು, ಎಲ್ಲರನ್ನೂ ಬಹಳ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು.

ಮೈಸೂರು ಸಂಸ್ಥಾನ ಹುಟ್ಟಿದ್ದು ಹೇಗೆ ಎಂಬುದನ್ನು ಇವರು ಸವಿವರವಾಗಿ ತಿಳಿಸಿದ್ದು, ಎಲ್ಲರಿಗೂ ಕೂಡ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುತ್ತಿದ್ದರು.

ಈಚನೂರು ಕುಮಾರ್‌ ನಿಧನಕ್ಕೆ ಪತ್ರಕರ್ತರು ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.

Tags:
error: Content is protected !!