Mysore
18
mist

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮೈಸೂರಿನಲ್ಲಿ ನರೇಗಾದಡಿ ಉದ್ಯೋಗ ಕ್ರಾಂತಿ 

ಮೈಸೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ, ನರೇಗಾ ಯೋಜನೆಯ ಮೂಲಕ ಉದ್ಯೋಗ ಕ್ರಾಂತಿ ನಡೆಸಲು ಮುಂದಾಗಿರುವ ಮೈಸೂರು ಜಿಲ್ಲಾ ಪಂಚಾಯಿತಿ ಮಾನವ ದಿನಗಳಲ್ಲಿ ಶೇ.100ರಷ್ಟು ಗುರಿ ಸಾಧಿಸುವ ಮೂಲಕ ಗಮನ ಸೆಳೆದಿದೆ.

ಗ್ರಾಮೀಣ ಭಾಗದ ಜನರ ಜೀವನಕ್ಕೆ ಬಲವಾಗಿ ನಿಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು 2024-25ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಶೇ.101.83 ರಷ್ಟು ಗುರಿ ಸಾಧಿಸಿ ಮಾದರಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ 3,38,973 ಲಕ್ಷ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಇವುಗಳಲ್ಲಿ 1,46,368 ಕುಟುಂಬಗಳ ಜಾಬ್ ಕಾರ್ಡ್ ಗಳು ಸಕ್ರಿಯವಾಗಿದ್ದು 277379 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿರುವುದು ಸಾಧನೆ ಹಿಡಿದ ಕೈಗನ್ನಡಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 24 ಲಕ್ಷ. ಮಾನವ ದಿನಗಳ ಗುರಿ ನಿಗಧಿಯಾಗಿತ್ತು ಇದರಲ್ಲಿ ಜಿಲ್ಲೆ 2443834 ಗುರಿ ಸಾಧಿಸಿದ್ದು ಶೇ.101.83 ರಷ್ಟು ಗುರಿ ಸಾಧಿಸಿದೆ

ಮೈಸೂರು ಜಿಲ್ಲಾವಾರು ನೋಡುವುದಾದರೆ ತಿ.ನರಸೀಪುರ 356975 ಮಾನವ ದಿನ ಗುರಿಯಲ್ಲಿ 402286 ಪೂರೈಸಿ ಶೇ.112.69ರಷ್ಟು ಸಾಧನೆ ಮಾಡಿದೆ. ಸರಗೂರು ತಾಲ್ಲೂಕು 176261 ಮಾನವ ದಿನ ಗುರಿಯಲ್ಲಿ 194478 ಪೂರೈಸಿ ಶೇ.110.34 ಸಾಧಿಸಿದ್ದು ಪಿರಿಯಾಪಟ್ಟಣ ತಾಲ್ಲೂಕು 314707 ಮಾನವ ದಿನ ಗುರಿಯಲ್ಲಿ 332733 ಮಾನವ ದಿನ ಸೃಷ್ಟಿಸಿ ಶೇ.105.73 ಸಾಧನೆ ಮಾಡಿದೆ ಸಾಲಿಗ್ರಾಮ ತಾಲ್ಲೂಕು 155098 ಮಾನವ ದಿನ ಗುರಿಯಲ್ಲಿ 161140 ಮಾನವ ದಿನ ಸೃಷ್ಟಿಸಿ ಶೇ.103.90 ರಷ್ಟು ಸಾಧನೆ ಮಾಡಿದೆ ಹಾಗೂ ಎಚ್.ಡಿ.ಕೋಟೆ ತಾಲ್ಲೂಕು 387119 ಮಾನವ ದಿನಗಳಿಗೆ 401055 ಮಾನವ ದಿನಗಳನ್ನು ಪೂರೈಸಿ ಶೇ.103.60 ಗುರಿ ಸಾಧಿಸಿದೆ.

ಆ ಮೂಲಕ ದುಡಿಯುವ ಕೈ ಕೂಲಿ, ತಾವಿರುವಲ್ಲೇ ಉದ್ಯೋಗ ನೀಡಿ ಜನರ ವಲಸೆ ತಪ್ಪಿಸಿ ಗ್ರಾಮೀಣ ಜನರ ಸಬಲೀಕರಣದ ಸಾಧನೆ ಮಾಡಿದೆ. ಅಂತರ್ಜಲ ಚೇತನ ಸಂರಕ್ಷಣೆ ಕಾಮಗಾರಿ, ರೈತರ ಕ್ರಿಯಾ ಯೋಜನೆ, ಹಸಿರೀಕರಣ ಕಾಮಗಾರಿ, ಶಾಲಾಭಿವೃದ್ಧಿ ಕಾಮಗಾರಿಗಳು, ಸಂಜೀವಿನಿ ಶೆಡ್ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.

ಇನ್ನು ರಸ್ತೆ ಕಾಮಗಾರಿ, ಚರಂಡಿ ಹಾಗೂ ಇನ್ನಿತರ ಸಮುದಾಯ ಮತ್ತು ವೈಯುಕ್ತಿಕ ಕಾಮಗಾರಿಗಳನ್ನು ಸೇರಿಸಲಾಗಿದೆ. ಇದರಿಂದ ಜನರಿಗೆ, ರೈತರಿಗೆ ಹಾಗೂ ಕೆಲಸ ಮಾಡುವವರಿಗೆ ಪ್ರಯೋಜನ ಸಿಗುತ್ತಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ತಿಳಿಸಿದ್ದಾರೆ.

Tags:
error: Content is protected !!