ಮೈಸೂರು: ಭುವನೇಶ್ವರಿ ತಾಯಿಯನ್ನು ಒಪ್ಪದವರಿಂದ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡಿಸುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭುವನೇಶ್ವರಿ ಒಪ್ಪದವರಿಂದ ದಸರಾ ಉದ್ಘಾಟನೆ ಮಾಡಿಸುತ್ತಿದ್ದಾರೆ. ಏನು ಮಾಡೋಕೆ ಆಗುತ್ತೆ ನಿಮ್ಮ ಹತ್ತಿರ? ಏನೂ ಮಾಡಲು ಆಗಲ್ಲ. ಕೊನೆಗೆ ಉತ್ಸವ ನಡೆಯುತ್ತೆ ಎಲ್ಲರೂ ಚಪ್ಪಾಳೆ ತಟ್ಟುತ್ತೀರಾ.! ವಿರೋಧದ ನಡುವೆಯೂ ಶಾಂತವಾಗಿದ್ದ ಹಿಂದೂಗಳು ಎಂದು ಮಾರನೇ ದಿನ ಪತ್ರಿಕೆಗಳಲ್ಲಿ ಬರೀತಾರೆ. ಇಷ್ಟೇ ಆಗೋದು. ಇದು ಬಿಟ್ಟು ಮುಂದೆ ಏನೂ ಆಗಲ್ಲ ಎಂದು ಬಾನು ಮುಸ್ತಾಕ್ ದಸರಾ ಉದ್ಘಾಟನೆ ಬಗ್ಗೆ ಹಿಂದೂಗಳೆಲ್ಲಾ ಸರಿಯಾಗಿ ವಿರೋಧ ಮಾಡಲಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.





