Mysore
14
few clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ.

ಅಭಿಜಿತ್ ಪುರೋಹಿತ್ ನಿರ್ದೇಶನದ ಲಕ್ಷ್ಮಿ (ಕನ್ನಡ), ಅಶೋಕ್ ರಾಜ್ ನಿರ್ದೇಶನದ ಯಾರೇ ನೀ ಯಾರೆ (ಕನ್ನಡ), ಪವನ್ ಎಸ್ ಪಿ. ನಿರ್ದೇಶನದ ಅನ್ವಾಂಟೆಡ್ ಕಿಡ್ (ಕನ್ನಡ),ದಿಲೀಪ್ ಕುಮಾರ್ ನಿರ್ದೇಶನದ ಪೊಲಾರ್ (ಕನ್ನಡ), ಸ್ಟ್ಯಾನಿ ಜೊಯ್ಸನ್ ನಿರ್ದೇಶನದ ತ್ರೀ ಕಾಲಂ (ಕನ್ನಡ), ಕೃತರ್ಥ್ ಮಂಡೆಕುಟ್ಟಂಡ ನಿರ್ದೇಶನದ ವರ್ತಕಳ್ಳಿ (ಕನ್ನಡ), ಸೂರಜ್ ಆರ್ ಶಂಕರ್ ನಿರ್ದೇಶನದ ತ್ರೆಡ್ಸ್ ಆಫ್ ಡೆಸ್ಟಿನಿ.. ಎ ಹ್ಯಾಪಿ ಡಿಸ್ಕವರಿ (ಕನ್ನಡ), ಜೀವನ್ ಗೌಡ ನಿರ್ದೇಶನದ ರಾಜ್ ಅಮ್ಮು (ಕನ್ನಡ), ರಘು ನಾಯಕ್ ನಿರ್ದೇಶನದ ಷಟ್ಪಥ (ಕನ್ನಡ) ಹಾಗೂ ಕನಕರಾಜ್ ಬಾಲಸುಬ್ರಮಣ್ಯಂ ನಿರ್ದೇಶನದ 99 (ತಮಿಳು) ಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದು ದಸರಾ ಚಲನಚಿತ್ರ ಉಪ ಸಮಿತಿಯ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!