Mysore
19
few clouds
Light
Dark

ದಸರಾ ಚಲನಚಿತ್ರೋತ್ಸವ- 2024| ಉತ್ತಮ ಕಿರುಚಿತ್ರ ಆಯ್ಕೆಗೆ ಪರಿಣಿತರಿಂದ ವೀಕ್ಷಣೆ

ಐನಾಕ್ಸ್ ಚಿತ್ರಮಂದಿರದಲ್ಲಿ ಆಯ್ಕೆಯಾದ ಅತ್ಯುತ್ತಮ ಕಿರು ಚಿತ್ರಗಳ ಪ್ರದರ್ಶನ

ಮೈಸೂರು : ದಸರಾ ಚಲನ ಚಿತ್ರೋತ್ಸವ 2024ರ ಅಂಗವಾಗಿ ಕಿರು ಚಿತ್ರಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂಬಂಧವಾಗಿ ಕಿರು ಚಿತ್ರ ಸ್ಪರ್ಧೆಗೆ ಬಂತಂಹ 72 ಕಿರು ಚಿತ್ರಗಳನ್ನು ಚಲನ ಚಿತ್ರ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವವರು ಉತ್ತಮ ಕಿರು ಚಿತ್ರಗಳ ಆಯ್ಕೆ ಸಂಬಂಧ ಇಂದು ವೀಕ್ಷಿಸಿದರು.

ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು ಚಲನ ಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದ್ದು ತೀರ್ಪುಗಾರರಿಂದ ಆಯ್ಕೆಯಾದ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅತ್ಯುತ್ತಮ ಕಿರು ಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು. ಕಿರುಚಿತ್ರಗಳ ಸ್ಪರ್ಧೆಗೆ 63 ಕನ್ನಡ ಭಾಷೆ, 2 ಮೂಕಿ ಚಿತ್ರ, 1 ಕೊಡವ, 1 ಹಿಂದಿ, 4 ತಮಿಳು ಹಾಗೂ 1 ಲಂಬಾಣಿ ಭಾಷೆಯ ಕಿರುಚಿತ್ರಗಳು ಬಂದಿರುತ್ತದೆ.

ಕಿರು ಚಿತ್ರ ಸ್ಪರ್ಧೆಗೆ ಬಂದಂತಹ ಕಿರು ಚಿತ್ರಗಳ ಆಯ್ಕೆ ಸಂಬಂಧ ತೀರ್ಪು ಗಾರರಾಗಿ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ನಟರು, ಕಿರುತರೆ ನಟರಾದ ಶಿವಾಜಿ ರಾವ್ ಜಾಧವ್, ಹಿರಿಯ ಚಲನಚಿತ್ರ ಛಾಯಾಗ್ರಾಹಕರು ಹಾಗೂ ನಿರ್ದೇಶಕರಾದ ಜನಾರ್ಧನ್, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಸಪ್ನಾ. ಎಂ.ಎಸ್ ಹಾಗೂ
ಛಾಯಾಗ್ರಾಹಕರು ಮತ್ತು ನಟರಾದ ಕೆ.ಜೆ.ಪವನ್ ಅವರು ಭಾಗವಹಿಸಿದ್ದರು

ಸಂದರ್ಭದಲ್ಲಿ ‌ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಕೆ.ಎನ್. ಬಸವರಾಜು, ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಹಾಗೂ ಸಮಿತಿಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಹರೀಶ್ ಟಿ.ಕೆ. ಹಾಗೂ ಚಲನ ಚಿತ್ರೋತ್ಸವದ ಸಹ ಸಂಯೋಜಕರಾದ ಶ್ರೇಯಸ್ ಮತ್ತು ಇತರರು ಉಪಸ್ಥಿತರಿದ್ದರು.