ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಅವರಣದಲ್ಲಿ ಬೀಡುಬಿಟ್ಟಿರುವ ದಸರಾಆನೆಗಳು ಫುಟ್ಬಾಲ್ ಆಡುವ ವಿಡಿಯೋವೊಂದು ಫುಲ್ ವೈರಲ್ ಆಗಿದೆ.
ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ 9 ಆನೆಗಳು, ತಾಲೀಮು ನಡೆಸಿ ವಿರಾಮದ ವೇಳೆ ಫುಟ್ಬಾಲ್ ಆಟ ಆಡಲಿವೆ.
ಮೈದಾನದಲ್ಲಿ ಮಾವುತರು ಹಾಗೂ ಕಾವಾಡಿಗರ ಮಕ್ಕಳು ಕೂಡ ಕ್ರಿಕೆಟ್, ಫುಟ್ಬಾಲ್ ಆಡುತ್ತಿದ್ದಾರೆ. ಈ ವೇಳೆ ಮಾವುತರ ಮಕ್ಕಳೊಂದಿಗೆ ಆನೆಗಳು ಕೂಡ ಫುಟ್ಬಾಲ್ ಆಡುತ್ತಿವೆ.
ಒಂದೆಡೆ ಕಿಲೋಮೀಟರ್ ಗಟ್ಟಲೆ ವಾಕ್ ಮಾಡಿ ರಿಲ್ಯಾಕ್ಸ್ ಮಾಡುವ ಆನೆಗಳು, ಬಿಡುವಿನ ವೇಳೆ ಮಕ್ಕಳೊಂದಿಗೆ ಫುಟ್ಬಾಲ್ ಆಟ ಆಡಲಿವೆ.ಸದ್ಯ ಆನೆಗಳು ಫುಟ್ಬಾಲ್ ಆಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.





